varthabharthi


ರಾಷ್ಟ್ರೀಯ

ಆರ್‌ಟಿಐ ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್‌ನಿಂದ ಆನ್‌ಲೈನ್ ಪೋರ್ಟಲ್ ಆರಂಭ

ವಾರ್ತಾ ಭಾರತಿ : 24 Nov, 2022

photo : PTI

ಹೊಸದಿಲ್ಲಿ, ನ. 24: ಸುಪ್ರೀಂ ಕೋರ್ಟ್‌(Supreme Court)ಗೆ ಸಂಬಂಧಿಸಿದ ಮಾಹಿತಿ ಪಡೆಯಲು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ಅರ್ಜಿಗಳನ್ನು ಸಲ್ಲಿಸಲು ಆನ್‌ಲೈನ್ ಪೋರ್ಟಲ್ ಅನ್ನು ಗುರುವಾರ ಆರಂಭಿಸಲಾಗಿದೆ. ಆನ್‌ಲೈನ್ ಪೋರ್ಟಲ್ ಆರಂಭಿಸಿರುವುದನ್ನು ಘೋಷಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ(D.Y. Chandrachud), ತಾಂತ್ರಿದ ದೋಷಗಳಿದ್ದರೆ ಗಮನಿಸುವಂತೆ ಹಾಗೂ ಪೋರ್ಟಲ್ ಅನ್ನು ಸುಧಾರಿಸಲು ಸಲಹೆಗಳನ್ನು ನೀಡುವಂತೆ ವಕೀಲರಿಗೆ ಸೂಚಿಸಿದ್ದಾರೆ.

ಸುಪ್ರೀಂ ಕೋರ್ಟ್‌ಗೆ ಸಂಬಂಧಿಸಿದ ಮಾಹಿತಿ ಪಡೆಯಲು ಆನ್‌ಲೈನ್‌ನಲ್ಲಿ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಲು ಕಾರ್ಯ ವಿಧಾನ ಕೋರಿ ಕಾನೂನು ವಿದ್ಯಾರ್ಥಿಗಳಾದ ಆಕೃತಿ ಅಗರ್ವಾಲ್ (Aggarwal)ಹಾಗೂ ಲಕ್ಷ ಪುರೋಹಿತ್(Laksha Purohit) ಸಲ್ಲಿಸಿದ ಮನವಿಯ ವಿಚಾರಣೆಯ ಆರಂಭದಲ್ಲಿ ನ್ಯಾಯಾಧೀಶರು ಈ ಘೋಷಣೆ ಮಾಡಿದರು.

 ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ(Hima Kohli) ಹಾಗೂ ಜೆ.ಬಿ. ಪರ್ದಿಪಾಲ್ (JB Pardipal)ಅವರನ್ನು ಕೂಡ ಒಳಗೊಂಡ ಪೀಠದ ನೇತೃತ್ವ ವಹಿಸಿದ್ದ ಚಂದ್ರಚೂಡ ಅವರು ಆನ್‌ಲೈನ್ ಪೋರ್ಟಲ್ ಇನ್ನು 15 ನಿಮಿಷಗಳಲ್ಲಿ ಕಾರ್ಯ ನಿರ್ವಹಿಸಲು ಆರಂಭವಾಗಲಿದೆ ಎಂದು ಹೇಳಿದರು.

ಈ ಪೋರ್ಟಲ್ ಅನ್ನು ಸಾರ್ವಜನಿಕ ಹಿತಾಸಕ್ತಿ ಕಾಯ್ದೆ ಅಡಿ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಭಾರತೀಯ ನಾಗರಿಕರು ಬಳಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು