ಉಡುಪಿ
ಉಡುಪಿ: ಸುಬ್ರಹ್ಮಣ್ಯ ಮಠದ ಶಾಖಾ ಮಠಕ್ಕೆ ಶಂಕುಸ್ಥಾಪನೆ
ವಾರ್ತಾ ಭಾರತಿ : 26 Nov, 2022
ಉಡುಪಿ: ನಗರದ ತೆಂಕುಪೇಟೆಯಲ್ಲಿರುವ ಸುಬ್ರಹ್ಮಣ್ಯ ಮಠದ ನಿವೇಶನದಲ್ಲಿ, ಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾಪ್ರಸನ್ನ ತೀರ್ಥರು ಹಾಗೂ ಸೋದೆ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥರು ನೂತನ ಸುಬ್ರಹ್ಮಣ್ಯ ಶಾಖಾ ಮಠದ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ರತ್ನಕುಮಾರ್, ಡಾ.ವ್ಯಾಸರಾಜ ತಂತ್ರಿ, ಮಟ್ಟು ಲಕ್ಷ್ಮೀನಾರಾಯಣ ರಾವ್, ವಿಶ್ವನಾಥ ಭಟ್ ಕೊಡವೂರು, ಶ್ರೀಧರ ಭಟ್, ಉದ್ಯಮಿಗಳಾದ ಶ್ರೀಪತಿ ಭಟ್, ರಾಜೇಂದ್ರ ಮಯ್ಯ, ಶ್ರೀವತ್ಸ ಆಚಾರ್ಯ, ವಿಷ್ಣು ಪಾಡಿಗಾರ್, ಸುಬ್ರಹ್ಮಣ್ಯ ಸಾಮಗ, ಮಧುಕರ ಮುದ್ರಾಡಿ ಮೊದಲಾದವರು ಉಪಸ್ಥಿತರಿದ್ದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)