varthabharthi


ಅಂತಾರಾಷ್ಟ್ರೀಯ

ಪಕ್ಷಾಧ್ಯಕ್ಷತೆಗೆ ರಾಜೀನಾಮೆ ನೀಡಿದ ತೈವಾನ್ ಅಧ್ಯಕ್ಷೆ

ವಾರ್ತಾ ಭಾರತಿ : 26 Nov, 2022

PHOTO : PTI 

ತೈಪೆ, ನ.26: ಸ್ಥಳೀಯ ಚುನಾವಣೆಯಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಯ ಹಿನ್ನೆಲೆಯಲ್ಲಿ ತೈವಾನ್ ಅಧ್ಯಕ್ಷೆ ತ್ಸಾಯಿಂಗ್ ವೆನ್ (Tsaiing Wen)ಆಡಳಿತಾರೂಢ ಡೆಮೊಕ್ರಾಟಿಕ್ ಪ್ರೋಗ್ರೆಸಿವ್ (Democratic Progressive)ಪಾರ್ಟಿಯ ಅಧ್ಯಕ್ಷತೆಗೆ ಶನಿವಾರ  ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ.

ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಅಭ್ಯರ್ಥಿಗಳನ್ನು ತಾನೇ ಆಯ್ಕೆ ಮಾಡಿರುವುದರಿಂದ ಸೋಲಿನ ಹೊಣೆಯನ್ನೂ ತಾನೇ ಹೊತ್ತುಕೊಂಡು ಪಕ್ಷಾಧ್ಯಕ್ಷತೆಗೆ ರಾಜೀನಾಮೆ ನೀಡುವುದಾಗಿ ಅವರು ಘೋಷಿಸಿದ್ದಾರೆ. 13 ಕೌಂಟಿಗಳು ಹಾಗೂ 9 ನಗರಗಳ ಆಡಳಿತ ಸಮಿತಿ ಹಾಗೂ ಮೇಯರ್ರನ್ನು ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ ವಿಪಕ್ಷ ನ್ಯಾಷನಲಿಸ್ಟ್ ಪಾರ್ಟಿ ಮೇಲುಗೈ ಸಾಧಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)