varthabharthi


ಕರ್ನಾಟಕ

ಕುಣಿಗಲ್ | ರಸ್ತೆ ಅಪಘಾತಕ್ಕೆ ಯುವಕ ಬಲಿ; ಇಬ್ಬರಿಗೆ ಗಾಯ

ವಾರ್ತಾ ಭಾರತಿ : 27 Nov, 2022

ತುಮಕೂರು, ನ.27: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ (Accident) ಪರಿಣಾಮ ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ರವಿವಾರ ಮುಂಜಾನೆ 3:3ರ ಸುಮಾರಿಗೆ ಕುಣಿಗಲ್ ಅಂಚೆಪಾಳ್ಯದ ಬಳಿ‌ ಸಂಭವಿಸಿರುವುದು ವರದಿಯಾಗಿದೆ.

ಮೃತರನ್ನು ಬೆಂಗಳೂರು ನಿವಾಸಿ ನರಸಿಂಹ(29) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ನಾಯಂಡನಹಳ್ಳಿ ನಿವಾಸಿಗಳಾದ ವಿಜಯ್ ಹಾಗೂ ಮನೋಜ್ ಎಂಬವರು ಗಾಯಗೊಂಡಿದ್ದು, ಅವರನ್ನು ಕುಣಿಗಲ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಮೂವರು ಬೆಂಗಳೂರಿನಿಂದ ಕಾರಿನಲ್ಲಿ ಹೆಬ್ಬೂರಿನಲ್ಲಿರುವ ಚಿಕ್ಜಣ್ಣನ ದೇವಸ್ಥಾನಕ್ಕೆ ಹೊರಟಿದ್ದರು. ಕಾರು ಕುಣಿಗಲ್ ಅಂಚೆಪಾಳ್ಯದ ಬಳಿ‌ ತಲುಪಿದಾಗ ಹಂಪ್ಸ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿತ್ತೆನ್ನಲಾಗಿದೆ.

 ಈ ಬಗ್ಗೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೈಸೂರು: ವಿವಾದಕ್ಕೆ ಕಾರಣವಾಗಿದ್ದ ಬಸ್ ತಂಗುದಾಣದ ಗೋಪುರಗಳು ರಾತ್ರೋರಾತ್ರಿ ತೆರವು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)