ಪೋಲ್ಯಾಂಡ್ ನಾಯಕ ಗೋಲು ದಾಖಲಿಸಿದ ತಕ್ಷಣ ತನ್ನ ಜೆರ್ಸಿ ಬದಲಾಯಿಸಿದ ಸೌದಿ ಅಭಿಮಾನಿ: ವೀಡಿಯೊ ವೈರಲ್
ದೋಹಾ: ಸೌದಿ ಅರೇಬಿಯಾ ವಿರುದ್ಧ ಶನಿವಾರ ನಡೆದ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಪೋಲ್ಯಾಂಡ್ ತಂಡವು 2-0 ಅಂತರದಿಂದ ಗೆಲುವನ್ನು ದಾಖಲಿಸಿತು. ನಾಯಕ ರಾಬರ್ಟ್ ಲೆವನ್ ಡೊವ್ ಸ್ಕಿ ವಿಶ್ವಕಪ್ನಲ್ಲಿ ತನ್ನ ಮೊದಲ ಗೋಲನ್ನು ದಾಖಲಿಸಿದರು. ಸ್ಟ್ರೈಕರ್ ಗೋಲು ದಾಖಲಿಸಿದ ನಂತರ ಭಾವುಕರಾದಂತೆ ಕಂಡುಬಂದಿದ್ದರು.
34 ವರ್ಷ ವಯಸ್ಸಿನ ರಾಬರ್ಟ್ ಮೆಕ್ಸಿಕೋ ವಿರುದ್ಧ ಪೆನಾಲ್ಟಿಯನ್ನು ತಪ್ಪಿಸಿಕೊಂಡಿದ್ದರು. ಆದ್ದರಿಂದ ಅವರು ತಮ್ಮ ಮೊದಲ ವಿಶ್ವಕಪ್ ಗೋಲಿಗಾಗಿ ಸ್ವಲ್ಪ ಸಮಯ ಕಾಯಬೇಕಾಯಿತು.
ಲೆವನ್ ಡೊವ್ ಸ್ಕಿ ಗೋಲು ದಾಖಲಿಸಿದ ತಕ್ಷಣ ಸೌದಿ ಅರೇಬಿಯಾ ಅಭಿಮಾನಿಯೊಬ್ಬರು ತಮ್ಮ ಜೆರ್ಸಿಯನ್ನು ' ಲೆವನ್ ಡೊವ್ ಸ್ಕಿ 9' ಗೆ ಬದಲಾಯಿಸಿದರು. ಅಭಿಮಾನಿಯೊಬ್ಬ ತನ್ನ ಜೆರ್ಸಿಯನ್ನು ಬದಲಾಯಿಸಿಕೊಂಡಿರುವ ವೀಡಿಯೊ ಇದೀಗ ವೈರಲ್ ಆಗಿದೆ.
ಜೆರ್ಸಿಯನ್ನು ಬದಲಾಯಿಸಿದ ನಂತರ ಸೌದಿ ಅಭಿಮಾನಿ ನೃತ್ಯ ಮಾಡಲು ಆರಂಭಿಸಿದರು ಹಾಗೂ ಲೆವನ್ ಡೊವ್ ಸ್ಕಿ ಅವರನ್ನು ಹುರಿದುಂಬಿಸಿದರು.
ಶನಿವಾರ ಸೌದಿ ಅರೇಬಿಯಾ ವಿರುದ್ಧ ಲೆವನ್ ಡೊವ್ ಸ್ಕಿ ಅವರು ತಮ್ಮ ಯಶಸ್ವಿ ವೃತ್ತಿಜೀವನದಲ್ಲಿ ಮೊದಲ ವಿಶ್ವಕಪ್ ಗೋಲನ್ನು ಗಳಿಸಿದರು.
— Out Of Context Football (@nocontextfooty) November 26, 2022