ಕರ್ನಾಟಕ
ಚಿತ್ರದುರ್ಗ | ಬೈಕಿಗೆ ಟ್ಯಾಂಕರ್ ಢಿಕ್ಕಿ: ಮೂವರು ಮೃತ್ಯು
ವಾರ್ತಾ ಭಾರತಿ : 27 Nov, 2022

ಚಿತ್ರದುರ್ಗ, ನ.27: ಬೈಕಿಗೆ ಟ್ಯಾಂಕರ್ ಢಿಕ್ಕಿ (Accident) ಹೊಡೆದ ಪರಿಣಾಮ ಮೂವರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ಕೈನಡು ಗ್ರಾಮದ ಬಳಿ ಶನಿವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ಕೈನಡು ಗ್ರಾಮದ ನಿವಾಸಿಗಳಾದ ಗಿರೀಶ್(23), ರವಿಕುಮಾರ್(29) ಹಾಗೂ ಉಜ್ಜೀರಪ್ಪ ಎಂದು ಗುರುತಿಸಲಾಗಿದೆ.
ಇವರು ಮೂವರು ಕಳೆದ ರಾತ್ರಿ ಒಂದೇ ಬೈಕಿನಲ್ಲಿ ಹೊಸದುರ್ಗದಿಂದ ಕೈನಡು ಗ್ರಾಂಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭಿವಿಸಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)