varthabharthi


ಉಡುಪಿ

ಕೋಟೇಶ್ವರ | ಹೆಜ್ಜೇನು ದಾಳಿ: ವಿದ್ಯಾರ್ಥಿಗಳಿಗೆ ಗಾಯ

ವಾರ್ತಾ ಭಾರತಿ : 27 Nov, 2022

ಕುಂದಾಪುರ, ನ.27: ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟಿ ಚೆನ್ನಯ್ಯ ಬಸ್ ನಿಲ್ದಾಣದ ಸಮೀಪ ಅರಾಲುಗುಡ್ಡೆ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ನಡೆಸಿದ್ದು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಆಟೋದಲ್ಲಿ ಕೋಟೇಶ್ವರದ ಕಿನಾರ ಪರಿಸರದ 9 ಮಕ್ಕಳು ಪ್ರಯಾಣಿಸುತ್ತಿದ್ದು, ಈ ಪೈಕಿ 5 ಮಕ್ಕಳು ಮತ್ತು ರಿಕ್ಷಾ ಚಾಲಕನಿಗೆ ಹೆಜ್ಜೇನು ಕಡಿದಿದೆ. ಈ ಪೈಕಿ 6ನೇ ತರಗತಿ ವಿದ್ಯಾರ್ಥಿನಿ ವಿಶಾಖ ಎಂಬ ಬಾಲಕಿ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.

  ರಾಘವೇಂದ್ರ ಎಂಬವರ ಆಟೋರಿಕ್ಷಾದಲ್ಲಿ ಶಾಲೆಗೆ ಹೋಗುವಾಗ ಏಕಾಏಕಿ ಹೆಜ್ಜೇನು ಗುಂಪಾಗಿ ಬಂದು  ವಿದ್ಯಾರ್ಥಿಗಳಿಗೆ ಕಡಿದಿವೆ. ಕೂಡಲೇ ಎಚ್ಚೆತ್ತುಕೊಂಡ ಚಾಲಕ ವಿದ್ಯಾರ್ಥಿಗಳನ್ನು ಅಲ್ಲಿಂದ ಬೇರೆ ಕಡೆ ಕರೆದೊಯ್ದು ಮಕ್ಕಳನ್ನು ಆರೈಕೆ ಮಾಡಿ ಕುಂದಾಪುರದ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ  ಸದಸ್ಯ ನಾಗರಾಜ್ ಪೂಜಾರಿ ಮತ್ತು ಶಿಕ್ಷಕರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)