varthabharthi


ಕ್ರೀಡೆ

ಭಾರತ-ನ್ಯೂಝಿಲ್ಯಾಂಡ್ ಎರಡನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದು

ವಾರ್ತಾ ಭಾರತಿ : 27 Nov, 2022

Photo:twitter

ಹ್ಯಾಮಿಲ್ಟನ್‌: ಭಾರತ ಹಾಗೂ  ನ್ಯೂಝಿಲ್ಯಾಂಡ್  ನಡುವಿನ ಎರಡನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.

ಇಲ್ಲಿನ  ಸೆಡನ್ ಪಾರ್ಕ್‌ನಲ್ಲಿ ಭಾರತ 12.5 ಓವರ್‌ಗಳಲ್ಲಿ 1 ವಿಕೆಟ್‌ಗೆ 89 ರನ್ ಗಳಿಸಿದ್ದಾಗ ಮಳೆಯು ಆಟಕ್ಕೆ ಅಡ್ಡಿಪಡಿಸಿತು. ಆಗ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.

ಮಳೆಯಿಂದಾಗಿ ಪಂದ್ಯವನ್ನು ಮೊದಲು ಪ್ರತಿ ತಂಡಕ್ಕೆ 29 ಓವರ್‌ಗಳಿಗೆ ಕಡಿತಗೊಳಿಸಲಾಯಿತು, ಆದರೆ ಮತ್ತೆ ಮಳೆ ಸುರಿದ ಕಾರಣ  ಸ್ಪರ್ಧೆಯನ್ನು ರದ್ದುಪಡಿಸಬೇಕಾಯಿತು.

ನ್ಯೂಝಿಲ್ಯಾಂಡ್  ನಾಯಕ ಕೇನ್ ವಿಲಿಯಮ್ಸನ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು

ಬುಧವಾರ ಕ್ರೈಸ್ಟ್ ಚರ್ಚ್ ನಲ್ಲಿ ಮೂರನೇ ಹಾಗೂ ಅಂತಿಮ ಪಂದ್ಯ ನಡೆಯಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)