varthabharthi


ರಾಷ್ಟ್ರೀಯ

ಪಶ್ಚಿಮಬಂಗಾಳದಲ್ಲಿ ಸಿಎಎ ಜಾರಿಯಾಗಲಿದೆ, ಧೈರ್ಯವಿದ್ದರೆ ಮುಖ್ಯಮಂತ್ರಿ ತಡೆಯಲಿ: ಸುವೇಂದು ಅಧಿಕಾರಿ

ವಾರ್ತಾ ಭಾರತಿ : 27 Nov, 2022

ಕೋಲ್ಕತ್ತಾ: ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯಾಗಲಿದೆ ಎಂದು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ Suvendu Adhikari ಪ್ರತಿಪಾದಿಸಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ Mamata Banerjee  ಧೈರ್ಯವಿದ್ದರೆ ಕಾಯ್ದೆಯ  ಜಾರಿಯನ್ನು ನಿಲ್ಲಿಸುವಂತೆ  ಸವಾಲೆಸೆದಿದ್ದಾರೆ.

 ಬಾಂಗ್ಲಾದೇಶ ಮೂಲದ  ಮಾಟುವಾಗಳ ಪ್ರಾಬಲ್ಯವಿರುವ ಪ್ರದೇಶವಾದ ಉತ್ತರ 24 ಪರಗಣ ಜಿಲ್ಲೆಯ ಠಾಕೂರ್‌ನಗರದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ  ಅಧಿಕಾರಿ, "ನಾವು ಸಿಎಎ ಬಗ್ಗೆ ಹಲವಾರು ಬಾರಿ ಚರ್ಚಿಸಿದ್ದೇವೆ. ಅದನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದು. ನಿಮಗೆ ಧೈರ್ಯವಿದ್ದರೆ, ಅದನ್ನು ಜಾರಿಗೊಳಿಸುವುದನ್ನು ನಿಲ್ಲಿಸಿ" ಎಂದು ನಂದಿಗ್ರಾಮ್ ಶಾಸಕ ಅಧಿಕಾರಿ  ಮುಖ್ಯಮಂತ್ರಿ ಮಮತಾ ರನ್ನು  ಸ್ಪಷ್ಟವಾಗಿ ಉಲ್ಲೇಖಿಸಿ ಸವಾಲು ಹಾಕಿದ್ದಾರೆ.

ಸಿಎಎ ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ  ಪಾಕಿಸ್ತಾನದಿಂದ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಹಾಗೂ  ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ವಲಸಿಗರಿಗೆ ಪೌರತ್ವವನ್ನು ನೀಡಲು ಅನುಕೂಲ ಮಾಡಿಕೊಡುತ್ತದೆ.

ಆದರೆ, ಕಾಯ್ದೆಯಡಿ ನಿಯಮಗಳನ್ನು ಸರಕಾರವು ಇನ್ನೂ ರೂಪಿಸದ ಕಾರಣ, ಇದುವರೆಗೆ ಯಾರಿಗೂ ಅದರ ಅಡಿಯಲ್ಲಿ ಪೌರತ್ವ ನೀಡಲು ಸಾಧ್ಯವಾಗಲಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)