varthabharthi


ರಾಷ್ಟ್ರೀಯ

ಮಧ್ಯಪ್ರದೇಶ: ಬ್ಯಾಂಕ್ ನಿಂದ 5 ಕೋ.ರೂ. ಮೌಲ್ಯದ ಚಿನ್ನ ದೋಚಿದ ಬಿಹಾರದ ಸಶಸ್ತ್ರ ಗ್ಯಾಂಗ್

ವಾರ್ತಾ ಭಾರತಿ : 27 Nov, 2022

Photo:twitter

ಭೋಪಾಲ್: ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ಚಿನ್ನದ ಮೇಲೆ ಸಾಲ ನೀಡುವ ಬ್ಯಾಂಕ್‌ನಿಂದ ಸುಮಾರು  5 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ  3.5 ಲಕ್ಷ ರೂ. ನಗದನ್ನು ಬಿಹಾರದ ಗ್ಯಾಂಗ್‌ನ ಆರು ಸದಸ್ಯರು ಕದ್ದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ.

ಘಟನೆ ಶನಿವಾರ ನಡೆದಿದೆ. ಆರು ಮಂದಿ ದರೋಡೆಕೋರರು ಮುಸುಕುಧಾರಿ ಹಾಗೂ  ಶಸ್ತ್ರಸಜ್ಜಿತರಾಗಿ ಬೈಕ್‌ಗಳಲ್ಲಿ ಬಂದು ಬಂದೂಕು ತೋರಿಸಿ ಬ್ಯಾಂಕ್‌ನಿಂದ ಬೆಲೆಬಾಳುವ ವಸ್ತುಗಳು ಹಾಗೂ  ಹಣವನ್ನು ದೋಚಿದ್ದಾರೆ ಎಂದು ಕಟ್ನಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಎಸ್‌.ಕೆ. ಜೈನ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಬಾರ್ಗವಾನ್ ಪ್ರದೇಶದಲ್ಲಿರುವ ಬ್ಯಾಂಕ್‌ಗೆ ಸರಿಯಾದ ಭದ್ರತಾ ವ್ಯವಸ್ಥೆ ಇರಲಿಲ್ಲ ಎಂದು ಅವರು ಹೇಳಿದರು.

ಬ್ಯಾಂಕ್ ಅಧಿಕಾರಿಗಳ ಪ್ರಕಾರ ದರೋಡೆಕೋರರು  4 ಕೋಟಿಯಿಂದ  5 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ  3.5 ಲಕ್ಷ ರೂ. ನಗದು ತೆಗೆದುಕೊಂಡು ಹೋಗಿದ್ದಾರೆ ಎಂದು ಜೈನ್ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)