varthabharthi


ರಾಷ್ಟ್ರೀಯ

ಬಿಜೆಪಿಗೆ ವಿಡಿಯೋ ಮಾಡುವ ಜವಾಬ್ದಾರಿಯನ್ನೇ ಮತದಾರರು ನೀಡಲಿದ್ದಾರೆ ಎಂದ ದಿಲ್ಲಿ ಸಿಎಂ

ಬಿಜೆಪಿ ವಿಡಿಯೋ ಮೇಕಿಂಗ್‌ ಕಂಪೆನಿ: ಸತ್ಯೇಂದ್ರ ಜೈನ್‌ ವಿಡಿಯೋ ಸೋರಿಕೆ ಕುರಿತಂತೆ ಅರವಿಂದ ಕೇಜ್ರಿವಾಲ್‌ ಪ್ರತಿಕ್ರಿಯೆ

ವಾರ್ತಾ ಭಾರತಿ : 27 Nov, 2022

‌Twitter/ArvindKejriwal

ಹೊಸದಿಲ್ಲಿ: ಜೈಲಿನಲ್ಲಿರುವ ದಿಲ್ಲಿ ಸಚಿವ ಸತ್ಯೇಂದ್ರ ಜೈನ್ ಅವರ ಜೈಲಿನ ಸೆಲ್‌ನ ಮತ್ತೊಂದು ವಿಡಿಯೋ ಸೋರಿಕೆಯಾದ ಹಿನ್ನೆಲೆಯಲ್ಲಿ, ದಿಲ್ಲಿ ಸಿಎಂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, “ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ, ಬಿಜೆಪಿಯು ವಿಡಿಯೋ ಮೇಕಿಂಗ್ ಕಂಪನಿ" ಆಗಿದೆ ಎಂದು ಹೇಳಿದ್ದಾರೆ.

ಗುಜರಾತ್‌ನಲ್ಲಿ ಮೊದಲ ಹಂತದ ಮತದಾನಕ್ಕೆ ದಿನಗಳ ಹಿನ್ನೆಲೆಯಲ್ಲಿ ಸೂರತ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಡಿಯೋ ಸೋರಿಕೆ ಕುರಿತು ಪ್ರತಿಕ್ರಿಯಿಸಿದ್ದು "ಪ್ರತಿ ವಾರ್ಡ್‌ನಲ್ಲಿ ವಿಡಿಯೋ ಅಂಗಡಿಗಳನ್ನು ತೆರೆಯುವುದಾಗಿ ಬಿಜೆಪಿ ದಿಲ್ಲಿಯಲ್ಲಿ ಭರವಸೆ ನೀಡಿದೆ" ಎಂದು‌ ವ್ಯಂಗ್ಯವಾಗಿ ಹೇಳಿದರು.  

ಇದೇ ಕುರಿತು ಟ್ವೀಟ್‌ ಮಾಡಿದ ಕೇಜ್ರಿವಾಲ್‌, “ದಿಲ್ಲಿ ಜನತೆಗೆ ಪ್ರತಿ ವಾರ್ಡ್‌ನಲ್ಲಿ ವಿಡಿಯೋ ಅಂಗಡಿ ತೆರೆಯಲಿದೆ ಎಂದು ಬಿಜೆಪಿ ಹೊಸ ಗ್ಯಾರಂಟಿ ನೀಡಿದೆ. ಬಿಜೆಪಿ ಒಂದು ವಿಡಿಯೋ ಮೇಕಿಂಗ್ ಕಂಪನಿ. ಈ ಚುನಾವಣೆಯಲ್ಲಿ ಸಾರ್ವಜನಿಕರು ಅವರಿಗೆ ವೀಡಿಯೋ ಮಾಡುವ ಜವಾಬ್ದಾರಿ ಹಾಗೂ ಶಾಲೆ, ಆಸ್ಪತ್ರೆ ಕಟ್ಟಿಸುವವರಿಗೆ ಸರ್ಕಾರ ನಡೆಸುವ ಜವಾಬ್ದಾರಿ ನೀಡಲಿದ್ದಾರೆ” ಎಂದು ಬರೆದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)