VIDEO - ಬಿಜೆಪಿ ಶಾಲು ಹಾಕೊಂಡ್ರೆ ಎಲ್ಲಾ ಪಾಪಗಳು ಮಾಯ: ಪ್ರಿಯಾಂಕ್ ಖರ್ಗೆ ಲೇವಡಿ
ಬೆಂಗಳೂರು, ನ. 29: ‘ಬಿಜೆಪಿ ಒಂದು ರೀತಿಯಲ್ಲಿ ವಾಷಿಂಗ್ ಮಷಿನ್ ಇದ್ದಂತೆ. ಯಾರು ಏನೇ ತಪ್ಪು ಮಾಡಿದ್ದರೂ ಅವರು ಬಿಜೆಪಿ ಶಾಲು ಅಥವಾ ಕೇಸರಿ ಶಾಲು ಧರಿಸಿದರೆ ಸಾಕು ಎಲ್ಲವೂ ಸ್ವಚ್ಛ ಆಗಿಬಿಡುತ್ತವೆ’ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರಿದರೆ ಪಾಪಿಗಳೆಲ್ಲ ಪಾವನರಾಗಿಬಿಡ್ತಾರೆ. ಬಿಜೆಪಿ ಹಣ ಮತ್ತು ತೋಳ್ಬಲವನ್ನು ಬಳಸುತ್ತಿರುವುದು ಇದರಿಂದ ಸ್ಪಷ್ಟ. ಸಿಸಿಬಿ ಪೊಲೀಸರಿಗೆ ಸೈಲೆಂಟ್ ಸುನಿಲ್ ಏಕೆ ಸಿಗುತ್ತಿಲ್ಲ ಎಂದು ತೇಜಸ್ವಿ ಸೂರ್ಯ ಕೇಳಿದರೆ ಗೊತ್ತಾಗುತ್ತದೆ’ ಎಂದು ಟೀಕಿಸಿದರು.
Next Story