KSRTC ಹೊಸ ಬಸ್‍ಗೆ ಬ್ರಾಂಡಿಂಗ್, ಟ್ಯಾಗ್‍ಲೈನ್ ಆಹ್ವಾನ; ವಿಜೇತರಿಗೆ ನಗದು ಬಹುಮಾನ
ಬೆಂಗಳೂರು, ನ. 29: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ) ನೂತನವಾಗಿ ಆರಂಭಿಸಲಿರುವ ಮಲ್ಟಿ ಆಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ ವಾಹನಗಳಿಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ ಬ್ರಾಂಡ್ ಹೆಸರು ಟ್ಯಾಗ್‍ಲೈನ್ ಹಾಗೂ ಗ್ರಾಫಿಕ್ಸ್ ಗಳನ್ನು ಆಹ್ವಾನಿಸಿದೆ.
ಪ್ರತಿ ಮಾದರಿಯ ವಾಹನಗಳಿಗೆ ಉತ್ತಮ ಬ್ರಾಂಡ್ ಹೆಸರನ್ನು ಸೂಚಿಸುವ ವಿಜೇತರಿಗೆ 10 ಸಾವಿರ ರೂ. ನಗದು ಬಹುಮಾನ ಹಾಗೂ ಉತ್ತಮ ಗ್ರಾಫಿಕ್ಸ್ ನೀಡಿದವರಿಗೆ ತಲಾ 25ಸಾವಿರ ರೂ.ಬಹುಮಾನ ನೀಡಲಾಗುವುದು. ‘ಬ್ರಾಂಡ್’ ಹೆಸರನ್ನು ಸೂಚಿಸಲು ಕಡೆಯ ಡಿಸೆಂಬರ್ 5 ಕೊನೆಯ ದಿನ. ನಿಮ್ಮ ಬ್ರ್ಯಾಂಡ್ ಐಡಿಯಾಗಳನ್ನು cpro @ksrtc.org ಈಮೇಲ್‍ಗೆ ಅಥವಾ ನಿಗಮದ ಫೇಸ್‍ಬುಕ್ ಅಥವಾ ಟ್ವಿಟರ್ ಖಾತೆಗೆ ಸಲ್ಲಿಸಬಹುದು ಎಂದು ಕೆಎಸ್ಸಾರ್ಟಿಸಿ ಪ್ರಕಟಣೆಯಲ್ಲಿ ಕೋರಿದೆ.
KSRTC New Line of Buses Branding Ideas pic.twitter.com/zNvnGTb5hl
— KSRTC (@KSRTC_Journeys) November 28, 2022
Next Story