ರೌಡಿ ಶೀಟರ್ ನಾಗನೊಂದಿಗೆ ಸಚಿವ ಸೋಮಣ್ಣಗೆ ಏನು ಕೆಲಸ?: ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು: ''ಬಿಜೆಪಿ, (BJP) ರೌಡಿಗಳ ಸಖ್ಯದ ಕತೆಗಳು ದಿನದಿನಕ್ಕೂ ಹೊರಬರುತ್ತಿವೆ, ಸಚಿವ ಸೋಮಣ್ಣನವರಿಗೆ ವಿಲ್ಸನ್ ಗಾರ್ಡನ್ ನಾಗನೊಂದಿಗೆ ಏನು ಕೆಲಸ?'' ಎಂದು ಕಾಂಗ್ರೆಸ್ (INCKarnataka) ಪ್ರಶ್ನೆ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ''ರೌಡಿಗಳೊಂದಿಗೆ ಬಿಜೆಪಿ ನಾಯಕರಿಗೆ ಏನು ಕೆಲಸ ಎನ್ನುವುದನ್ನು ನಳಿನ್ ಕುಮಾರ್ ಕಟೀಲ್ ಉತ್ತರಿಸುವರೇ? ರೌಡಿಗಳನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಮೇಲುದನಿಯಲ್ಲಿ ಹೇಳುವ ಸಿಎಂ ಬೊಮ್ಮಾಯಿ ಅವರು ಉತ್ತರಿಸುವರೇ?'' ಎಂದು ಪ್ರಶ್ನೆ ಮಾಡಿದೆ.
''ಹಣಬಲದಲ್ಲಿ ರಾಜಕಾರಣ ಮಾಡ್ತಿದ್ದ ಬಿಜೆಪಿ ಈಗ ತೋಳ್ಬಲದ ರಾಜಕೀಯ ಮಾಡಲು ಮುಂದಾಗಿದೆ. ಹಗರಣ, ವೈಫಲ್ಯಗಳ ಸರಮಾಲೆಯನ್ನೇ ಹೊತ್ತಿರುವ ಬಿಜೆಪಿ ಚುನಾವಣೆ ಗೆಲ್ಲುವುದಕ್ಕೆ ಎಲ್ಲಾ ದುಷ್ಟ ಮಾರ್ಗಗಳನ್ನೂ ಹಿಡಿಯುತ್ತಿದೆ. ಮತದಾರ ಮಾಹಿತಿ ಕಳ್ಳತನ ಒಂದೆಡೆಯಾದರೆ, ರೌಡಿಗಳನ್ನು ಬಳಸಿ ಬೆದರಿಸಿ ಮತ ಪಡೆಯಲು ರೌಡಿ ಮೋರ್ಚಾ ಸ್ಥಾಪನೆಗೆ ಹೊಂಚು ಹಾಕಿದೆ'' ಎಂದು ಕಾಂಗ್ರೆಸ್ ಕಿಡಿಕಾರಿದೆ.
ಬಿಜೆಪಿ, ರೌಡಿಗಳ ಸಖ್ಯದ ಕತೆಗಳು ದಿನದಿನಕ್ಕೂ ಹೊರಬರುತ್ತಿವೆ,
— Karnataka Congress (@INCKarnataka) December 1, 2022
ರೌಡಿಗಳೊಂದಿಗೆ ಬಿಜೆಪಿ ನಾಯಕರಿಗೆ ಏನು ಕೆಲಸ ಎನ್ನುವುದನ್ನು @nalinkateel ಉತ್ತರಿಸುವರೇ?
ಸಚಿವ ಸೋಮಣ್ಣನವರಿಗೆ ವಿಲ್ಸನ್ ಗಾರ್ಡನ್ ನಾಗನೊಂದಿಗೆ ಏನು ಕೆಲಸ?
ರೌಡಿಗಳನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಮೆಲುದನಿಯಲ್ಲಿ ಹೇಳುವ ಸಿಎಂ @BSBommai ಅವರು ಉತ್ತರಿಸುವರೇ? pic.twitter.com/ummxxeDEWu