ಸುಮಿತ್ರಾ ಐತಾಳ್
ಕುಂದಾಪುರ, ಡಿ.1: ಕುಂದಾಪುರದ ಖ್ಯಾತ ಲೇಖಕಿ, ಕುಂದಾಪ್ರ ಕನ್ನಡದಲ್ಲಿ ರೂಪಕ, ನಾಟಕ, ಸಾಹಿತ್ಯ ರಚನೆ ಮಾಡಿದ ಶಿಕ್ಷಕಿ ಸುಮಿತ್ರಾ ಐತಾಳ (58) ಡಿ.1ರಂದು ಸಂಜೆ ನಿಧನರಾದರು.
ಇತ್ತೀಚಿನವರೆಗೂ ಟಿವಿ, ರೇಡಿಯೋ ಮಾಧ್ಯಮಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದ ಸುಮಿತ್ರಾ ಐತಾಳ್, ಕಿರಿಮಂಜೇಶ್ವರ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ಇವರ ಪುಸ್ತಕ ಬಿಡುಗಡೆ ಹಾಗೂ ನಾಟಕ ಪ್ರದರ್ಶನ ಕೆಲವು ದಿನಗಳ ಹಿಂದೆ ನಡೆಯಬೇಕಾಗಿದ್ದು, ಅವರ ಅನಾರೋಗ್ಯದ ಕಾರಣ ಮುಂದೂಡಲಾಗಿತ್ತು.
ಸುಮಿತ್ರಾ ಐತಾಳ್ ಪತಿ ಹಾಗೂ ಪುತ್ರನನ್ನು ಅಗಲಿದ್ದಾರೆ.
Next Story