varthabharthi


ಬೆಂಗಳೂರು

ಬೆಂಗಳೂರು | ಊಟ ಇಲ್ಲ ಎಂದಿದ್ದಕ್ಕೆ ಹೊಟೇಲ್ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣ: 7 ಮಂದಿ ಸೆರೆ

ವಾರ್ತಾ ಭಾರತಿ : 2 Dec, 2022

ಬೆಂಗಳೂರು, ಡಿ. 2: ಕ್ಷುಲ್ಲಕ ಕಾರಣಕ್ಕೆ ರೆಸ್ಟೋರೆಂಟ್‍ ಮಹಿಳಾ  ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣ ಸಂಬಂಧ ಏಳು ಮಂದಿ ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ರೂಪೇನ ಅಗ್ರಹಾರದ ಶಂಕರ್, ಗಟ್ಟಹಳ್ಳಿ ಕೀರ್ತಿ, ಗಾರ್ವೆಪಾಳ್ಯದ ಅಭಿಷೇಕ್, ಬಂಡೆಪಾಳ್ಯದ ಅಭಿಷೇಕ್, ಸೋಮಸುಂದರ ಪಾಳ್ಯದ ಪ್ರವೀಣ್, ಲಕ್ಕಸಂದ್ರದ ಹೇಮಂತ್ ಕುಮಾರ್, ಕೂಡ್ಲಿಯ ಅಭಿಲಾಷ್ ಬಂಧಿತ ಆರೋಪಿಗಳಾಗಿದ್ದಾರೆ. ತಲೆಮರೆಸಿಕೊಂಡಿರುವ ರಾಷ್ಟ್ರೀಯ ಪಕ್ಷದ ಮುಖಂಡರೊಬ್ಬರ ಪುತ್ರಧನುಷ್ ಎಂಬಾತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿನಗರದ ರೆಸ್ಟೋರೆಂಟ್‍ವೊಂದರಲ್ಲಿ ನ.20ರಂದು ಘಟನೆ ನಡೆದಿದ್ದು, ತಡರಾತ್ರಿ ಜನರ ಗುಂಪು ರೆಸ್ಟೋರೆಂಟ್‍ಗೆ ಊಟದ ವಿಚಾರವಾಗಿ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದರೆನ್ನಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು; ಊಟ ಇಲ್ಲ ಎಂದಿದ್ದಕ್ಕೆ ರಾಜಕೀಯ ಮುಖಂಡನ ಪುತ್ರನಿಂದ ಹೊಟೇಲ್ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ; ಪ್ರಕರಣ ದಾಖಲು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)