varthabharthi


ಕ್ರೀಡೆ

ಫೈನಲ್‌ನಲ್ಲಿ ಮಹಾರಾಷ್ಟ್ರ ವಿರುದ್ಧ 5 ವಿಕೆಟ್ ಜಯ

ವಿಜಯ್ ಹಝಾರೆ ಟ್ರೋಫಿ: ಸೌರಾಷ್ಟ್ರ ಚಾಂಪಿಯನ್

ವಾರ್ತಾ ಭಾರತಿ : 2 Dec, 2022

photo : twitter 

 ಅಹಮದಾಬಾದ್, ಡಿ.2: ಮಹಾರಾಷ್ಟ್ರ ತಂಡವನ್ನು 5 ವಿಕೆಟ್ ಅಂತರದಿಂದ ಸೋಲಿಸಿದ ಆತಿಥೇಯ ಸೌರಾಷ್ಟ್ರ ತಂಡ ವಿಜಯ್ ಹಝಾರೆ ಟ್ರೋಫಿಯನ್ನು ಗೆದ್ದುಕೊಂಡಿದೆ.

ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮಹಾರಾಷ್ಟ್ರ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿತು. ಗೆಲ್ಲಲು 249 ರನ್ ಗುರಿ ಬೆನ್ನಟ್ಟಿದ ಸೌರಾಷ್ಟ್ರ 46.3 ಓವರ್‌ಗಳಲ್ಲಿ ಗುರಿ ತಲುಪಿತು.

ಆರಂಭಿಕ ಬ್ಯಾಟರ್ ಶೆಲ್ಡನ್ ಜಾಕ್ಸನ್(ಔಟಾಗದೆ 133 ರನ್, 136 ಎಸೆತ)ಭರ್ಜರಿ ಶತಕ ಹಾಗೂ ಹಾರ್ವಿಕ್ ದೇಸಾಯಿ ಅರ್ಧಶತಕ(50 ರನ್, 67 ಎಸೆತ) ಸಿಡಿಸಿ ಸೌರಾಷ್ಟ್ರದ ಗೆಲುವಿನ ಹಾದಿ ಸುಗಮಗೊಳಿಸಿದರು.

ಇದಕ್ಕೂ ಮೊದಲು ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಶತಕದ(108 ರನ್, 131 ಎಸೆತ)ಸಹಾಯದಿಂದ ಮಹಾರಾಷ್ಟ್ರ 9 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿತು. ಸೌರಾಷ್ಟ್ರದ ಪರ ಚಿರಾಗ್ ಜಾನಿ(3-43)ಮೂರು ವಿಕೆಟ್ ಪಡೆದರು.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)