varthabharthi


ರಾಷ್ಟ್ರೀಯ

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ: 111 ಮರಾಠ ಸಮುದಾಯದ ಅಭ್ಯರ್ಥಿಗಳ ನೇಮಕಾತಿಗಳಿಗೆ ತಡೆ ನೀಡಿದ ಹೈಕೋರ್ಟ್

ವಾರ್ತಾ ಭಾರತಿ : 2 Dec, 2022

ಸಾಂದರ್ಭಿಕ ಚಿತ್ರ

ಮುಂಬೈ: ಆರ್ಥಿಕವಾಗಿ ಹಿಂದುಳಿದ ವರ್ಗದ ಮೀಸಲಾತಿಯಡಿ (EWS) ಮಹಾರಾಷ್ಟ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ ಎಂಜಿನಿಯರಿಂಗ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದ್ದ 111 ಮರಾಠ ಸಮುದಾಯದ ಅಭ್ಯರ್ಥಿಗಳ (Maratha candidates) ನೇಮಕಾತಿಗೆ ಬಾಂಬೆ ಹೈಕೋರ್ಟ್ (Bombay HC) ಗುರುವಾರ ತಡೆಯಾಜ್ಞೆ ನೀಡಿದೆ ಎಂದು indianexpress.com ವರದಿ ಮಾಡಿದೆ.

ಮಹಾರಾಷ್ಟ್ರ ಸರಕಾರ ಜಾರಿಗೆ ತಂದಿದ್ದ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಾಯ್ದೆ, 2018ರ ಅಡಿ ಒದಗಿಸಲಾಗಿದ್ದ ಮರಾಠ ಮೀಸಲಾತಿ ಅನ್ನು ಕಳೆದ ವರ್ಷ ಮೇಯಲ್ಲಿ ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಈ ಪ್ರಾತಿನಿಧ್ಯವು ಐತಿಹಾಸಿಕ ಇಂದಿರಾ ಸಾಹ್ನಿ ಪ್ರಕರಣದ ತೀರ್ಪಿನಲ್ಲಿ ವಿಧಿಸಲಾಗಿದ್ದ ಶೇ. 50ರ ಮೀಸಲಾತಿ ಮಿತಿಯನ್ನು ಉಲ್ಲಂಘಿಸಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತ್ತು. ಇದಾದ ನಂತರ ಈ ಪ್ರವರ್ಗದಡಿಯಲ್ಲಿ ಹೊರಡಿಸಲಾಗಿದ್ದ ನೇಮಕಾತಿ ಆದೇಶವನ್ನು ಆರ್ಥಿಕವಾಗಿ ಹಿಂದುಳಿದ ವರ್ಗದ ಪ್ರವರ್ಗದಡಿಯಲ್ಲಿ ತರಲಾಗಿತ್ತು.

ಈ ತೀರ್ಪಿನ ನಂತರ ಮಹಾರಾಷ್ಟ್ರ ಸರ್ಕಾರವು 2018ರ ಕಾಯ್ದೆ ಅನ್ವಯ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದ್ದ 111 ಮರಾಠ ಸಮುದಾಯದ ಅಭ್ಯರ್ಥಿಗಳಿಗೆ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ವಿಸ್ತರಿಸಿತ್ತು.

ಉದ್ಯೋಗ ನೇಮಕಾತಿಯಲ್ಲಿ ಮಹಾರಾಷ್ಟ್ರ ಲೋಕಸೇವಾ ಆಯೋಗವು ಒಟ್ಟು 1143 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಆದರೆ, ನ್ಯಾಯಾಲಯವು ಗುರುವಾರ ಹೊರಡಿಸಿರುವ ಆದೇಶದಲ್ಲಿ 111 ಮರಾಠ ಸಮುದಾಯದ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಹಸಿರು ನಿಶಾನೆ ತೋರಿಸಿದೆ.

ಈ 111 ಅಭ್ಯರ್ಥಿಗಳಿಗೆ ಮಧ್ಯಂತರ ಪರಿಹಾರ ಒದಗಿಸಿದ್ದ ಮಹಾರಾಷ್ಟ್ರ ಆಡಳಿತ ನ್ಯಾಯ ಮಂಡಳಿ, ಪ್ರಕರಣದ ಕುರಿತು ತನ್ನ ಅಂತಿಮ ತೀರ್ಮಾನದ ಷರತ್ತಿಗೆ ಒಳಪಟ್ಟು ಅವರೆಲ್ಲರ ನೇಮಕಾತಿಗೆ ಅನುಮತಿ ನೀಡಿತ್ತು. ಈ ತೀರ್ಪನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು.

ಪ್ರಕರಣದ ಕುರಿತು ತನ್ನ ತೀರ್ಪು ಪ್ರಕಟಿಸಿರುವ ಹೈಕೋರ್ಟ್, ನ್ಯಾಯ ಮಂಡಳಿಯು ತನ್ನ ಅಂತಿಮ ವಿಚಾರಣೆಯನ್ನು ದಿನಾಂಕವನ್ನು ಡಿ. 2ಕ್ಕೆ ನಿಗದಿಪಡಿಸಿರುವುದರಿಂದ ಅದಕ್ಕೂ ನೇಮಕಾತಿ ಮಾಡಿಕೊಂಡರೆ ಬಿಕ್ಕಟ್ಟು ಉದ್ಭವವಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದೆ.

“ನಾವು ಸಾಮಾನ್ಯವಾಗಿ ನ್ಯಾಯಮಂಡಳಿಯ ಮುಂದೆ ಅರ್ಜಿಗಳು ವಿಚಾರಣೆಗೆ ಬಾಕಿ ಇರುವಾಗ, ಅದರ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದರಿಂದ ದೂರವೇ ಉಳಿಯಲು ಬಯಸುತ್ತೇವೆ. ಆದರೆ, ಅದರ ಮುಂದೆ ಇರುವ ಪ್ರಕರಣದ ಪ್ರಾಮುಖ್ಯತೆಯನ್ನು ಗಮನಕ್ಕೆ ತೆಗೆದುಕೊಂಡು, 2023ರ ಜನವರಿ ಅಂತ್ಯದ ವೇಳೆಗೆ ಅರ್ಜಿಯನ್ನು ಪರಿಗಣಿಸುವಂತೆ ನ್ಯಾಯ ಮಂಡಳಿಯನ್ನು ಒತ್ತಾಯಿಸುತ್ತೇವೆ” ಎಂದು ನ್ಯಾ. ದೀಪಾಂಕರ್ ದತ್ತ ಹಾಗೂ ನ್ಯಾ. ಅಭಯ್ ಹುಜಾಅವರನ್ನುಒಳಗೊಂಡಿದ್ದಪೀಠವುಸೂಚಿಸಿದೆ.

ಒಂದುವೇಳೆನ್ಯಾಯಮಂಡಳಿಯನಿಯಮಗಳು111 ಅಭ್ಯರ್ಥಿಗಳಪರಹೊರಹೊಮ್ಮಿದರೆ, ಅವರಜ್ಯೇಷ್ಠತೆಯನ್ನುನೇಮಕಾತಿದಿನಾಂಕವಾದಡಿಸೆಂಬರ್ 1ರಿಂದಗಣನೆಗೆತೆಗೆದುಕೊಳ್ಳಲಾಗುತ್ತದೆ.

ಎ.ಎಂ. ಹೌಶೆಟ್ಟೆ ಎಂಬ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿರುವ ವ್ಯಕ್ತಿಯು ಅರ್ಜಿ ಸಲ್ಲಿಸಿದ್ದರು.

ಮಹಾರಾಷ್ಟ್ರ ಸರ್ಕಾರವು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಆರ್ಥಿಕವಾಗಿ ಹಿಂದುಳಿದ ವರ್ಗದ ಮೀಸಲಾತಿ ಅಡಿಯಲ್ಲಿ ನೇಮಕಾತಿ ಮಾಡಲು ಹೊರಟಿರುವುದು ನೇಮಕಾತಿ ಪ್ರಕ್ರಿಯೆಯನ್ನು ಪೂರ್ವಗ್ರಹ ಪೀಡಿತಗೊಳಿಸಲಿದೆ ಎಂದು ಅವರು ಹೈಕೋರ್ಟ್ ಎದುರು ಪ್ರತಿಪಾದಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)