'ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ’ ಇದು ಬಿಜೆಪಿ ಹೊಸ ಧ್ಯೇಯವಾಕ್ಯ: ಕಾಂಗ್ರೆಸ್ ಲೇವಡಿ
ಬೆಂಗಳೂರು, ಡಿ. 4: ‘ರೌಡಿಗಳನ್ನು ರೌಡಿಗಳೆನ್ನಬೇಡಿ’-ಇದು ಮಾಜಿ ರೌಡಿ ಶೀಟರ್ ಸಿ.ಟಿ.ರವಿ ಫಾರ್ಮಾನು!, ರೌಡಿ ಮೋರ್ಚಾದ ತಯಾರಿ ನಡೆಸಿರುವ ಬಿಜೆಪಿ ಈಗ ರೌಡಿಗಳ ಪರವಾಗಿ ನಿರ್ಲಜ್ಜವಾಗಿ ಸಮರ್ಥನೆಗೆ ಇಳಿದಿದೆ, ತಾವೂ ರೌಡಿಗಳಾಗಿದ್ದೆವು ಎಂಬುದನ್ನೂ ಒಪ್ಪುತ್ತಿದ್ದಾರೆ! ‘ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ’ ಇದು ಬಿಜೆಪಿಯ ಹೊಸ ಧ್ಯೇಯವಾಕ್ಯ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಪರೋಡಿಗಳಿಂದ ರೌಡಿಗಳ ಸಮರ್ಥನೆ! ಬಿಜೆಪಿ ಸೇರಿದರೆ ಸಮಾಜಘಾತುಕರಿಗೂ ಸಮಾಜ ಸೇವಕರ ಬಿರುದು ನೀಡಲಾಗುತ್ತದೆ ಎಂಬುದಕ್ಕೆ ಸಂಸದ ಪ್ರತಾಪ್ ಸಿಂಹ ಅವರ ರೌಡಿಗಳ ಪರ ಸಮರ್ನೆಯೇ ಸಾಕ್ಷಿ. ಕೊಲೆ, ಸುಲಿಗೆ, ದರೋಡೆ ಮಾಡಿದವರಿಗೆ ರೆಡ್ ಕಾರ್ಪೆಟ್ ಹಾಕುತ್ತಿರುವ ಬಿಜೆಪಿ ನಿರ್ಲಜ್ಜತನದ ಪರಮಾವಧಿಯನ್ನು ತಲುಪಿದೆ ಬಿಜೆಪಿ. ಬಿಜೆಪಿಯ ಅಸಲಿ ಸಂಸ್ಕøತಿ ಬೆತ್ತಲಾಗಿದೆ’ ಎಂದು ವಾಗ್ದಾಳಿ ನಡೆಸಿದೆ.
‘ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಆಶಯಗಳನ್ನು ಮುಗಿಸಲೆಂದೇ ಬಿಜೆಪಿ ರೌಡಿ ಮೋರ್ಚಾ ಕಟ್ಟುತ್ತಿದೆ. ಸಾಂವಿಧಾನಿಕ ಆಶಯದ ಮಾದರಿಯಲ್ಲಿ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಮುಂದಾಗಿದೆ ಬಿಜೆಪಿಯ ರೌಡಿ ಮೋರ್ಚಾ ಪಡೆ. ಇಂತಹ ಹಲ್ಲೆಗಳನ್ನು ಹೆಚ್ಚಿಸಲೆಂದೇ ರೌಡಿ ಮೋರ್ಚಾ ಕಟ್ಟುತ್ತಿದ್ದೀರಾ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಉದ್ಘಾಟನೆ ಯಾವಾಗ: ‘ಬಿಜೆಪಿ ರೌಡಿ ಮೋರ್ಚಾ ಸೇರಲು ಬೇಡಿಕೆ ಹೆಚ್ಚುತ್ತಿದೆ! ಒಬ್ಬರ ಮೇಲೆ ಒಬ್ಬರಂತೆ ಬಿಜೆಪಿ ನಾಯಕರು ರೌಡಿಗಳ ಸಮರ್ಥನೆಗೆ ಇಳಿದಿರುವಾಗ ರೌಡಿಗಳಿಗೂ ಬಿಜೆಪಿ ಮೇಲೆ ಪ್ರೇಮ ಉಕ್ಕಿ ಹರಿಯುತ್ತಿದೆ. ಬಿಜೆಪಿಯ, ರೌಡಿ ಮೋರ್ಚಾದ ಉದ್ಘಾಟನೆ ಯಾವಾಗ? ಉದ್ಘಾಟನೆಗೆ ಅಮಿತ್ ಶಾ ಬರುವರೇ, ಅಥವಾ ಬೊಮ್ಮಾಯಿಯವರೇ ಟೇಪ್ ಕಟ್ ಮಾಡುತ್ತಾರಾ?!’ ಎಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.
------------------------------------------
‘ಪಕ್ಷದ ತುಂಬಾ ಗೂಂಡಾಗಳನ್ನು ತುಂಬಿಸಿಕೊಂಡಿರುವ ಕಾಂಗ್ರೆಸ್ಸಿಗೆ ಬಿಜೆಪಿಯ ನೈತಿಕತೆ ಬಗ್ಗೆ ಮಾತಾಡುವ ಹಕ್ಕಿಲ್ಲ. ಕಾಂಗ್ರೆಸ್ ಮುನ್ನೆಲೆಯ ನಾಯಕರೇ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ ಎನ್ನುವಂತಾಗಿದೆ’
-ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ
ರೌಡಿಗಳನ್ನು ರೌಡಿಗಳೆನ್ನಬೇಡಿ - ಇದು ಮಾಜಿ ರೌಡಿ ಶೀಟರ್ @CTRavi_BJP ಫಾರ್ಮಾನು!
— Karnataka Congress (@INCKarnataka) December 4, 2022
ರೌಡಿ ಮೋರ್ಚಾದ ತಯಾರಿ ನಡೆಸಿರುವ ಬಿಜೆಪಿ ಈಗ ರೌಡಿಗಳ ಪರವಾಗಿ ನಿರ್ಲಜ್ಜವಾಗಿ ಸಮರ್ಥನೆಗೆ ಇಳಿದಿದೆ, ತಾವೂ ರೌಡಿಗಳಾಗಿದ್ದೆವು ಎಂಬುದನ್ನೂ ಒಪ್ಪುತ್ತಿದ್ದಾರೆ!
"ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ" ಇದು
ಬಿಜೆಪಿಯ ಹೊಸ ದ್ಯೇಯವಾಕ್ಯ. pic.twitter.com/oFGAfPyOvT