ಯುಎಇ ಪ್ರವಾಸದಲ್ಲಿರುವ ಡಿಕೆ ಶಿವಕುಮಾರ್, ಶಾಸಕ ಹಾರಿಸ್, ಮುಹಮ್ಮದ್ ನಲಪಾಡ್: ಬ್ಯಾರೀಸ್ ವೆಲ್ಫೇರ್ ಫೋರಮ್ ಭೇಟಿ
ದುಬೈ: ಯುಎಇ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇಂದಿರಾನಗರ ಶಾಸಕ ಎನ್.ಎ ಹಾರಿಸ್ ನಲಪಾಡ್ ಮತ್ತು ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ನಲಪಾಡ್ ಅವರನ್ನು ಬ್ಯಾರೀಸ್ ವೆಲ್ಫೇರ್ ಫೋರಮ್ ಅಬುಧಾಬಿ (BWF) ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ಪದಾಧಿಕಾರಿಗಳಾದ ಅಬ್ದುಲ್ ರವೂಫ್ ಕೈಕಂಬ, ಹಂಝ ಕಣ್ಣಂಗಾರ್, ಇರ್ಫಾನ್ ಕುದ್ರೋಳಿ ಮತ್ತು ಹನೀಫ್ ಉಳ್ಳಾಲ ಭೇಟಿ ಮಾಡಿ ಅನಿವಾಸಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರದ ಕುರಿತು ಚರ್ಚಿಸಿದರು.
ಈ ಸಂದರ್ಭ ಕೆಎಂಸಿಸಿ ರಾಜ್ಯ ಕಾರ್ಯದರ್ಶಿ ಅಡ್ವಕೇಟ್ ಖಲೀಲ್, IYC ಕೌನ್ಸಿಲ್ ಗ್ಲೋಬಲ್ ಇದರ ಸದಸ್ಯ ಫರ್ವೇಝ್ ಜಿ.ಕೆ, ಯುಎಇ ಕನ್ನಡಿಗರಾದ ನಿಝಾಮ್ ವಿ.ಕೆ, ನೂರ್ ಅಶ್ಫಾಕ್ ಮತ್ತು ಸಲಾಮ್ ದೇರಳಕಟ್ಟೆ ಉಪಸ್ಥಿತರಿದ್ದರು.
ಕೆಎನ್‌ಆರ್‌ಐ ಫೋರಮ್ ವತಿಯಿಂದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಅವರು ಡಿಕೆ ಶಿವಕುಮಾರ್ ರನ್ನು ಸನ್ಮಾನಿಸಿ, ಮನವಿ ಪತ್ರ ನೀಡಿದರು. ಉಪಾಧ್ಯಕ್ಷ ಸರ್ವೋತಮ ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.