'ನೊಂದ ಗುತ್ತಿಗೆದಾರರು ಪ್ರಾಯೋಜಿಸುವ Guess & Win Contest'; ಸಚಿವ ಮುನಿರತ್ನ ವಿರುದ್ಧ ಪ್ರತ್ಯಕ್ಷಗೊಂಡ ಪೋಸ್ಟರ್
ಬೆಂಗಳೂರು, ಡಿ.8: ರಾಜ್ಯ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ‘ಪೇ ಸಿಎಂ’ ಕ್ಯೂಆರ್ ಕೋಡ್ ಪೋಸ್ಟರ್ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಇದೀಗ ರಾಜರಾಜೇಶ್ವರಿ ನಗರ (ಆರ್.ಆರ್.ನಗರ) ವಿಧಾನಸಭಾ ಕ್ಷೇತ್ರದ ಹಲವೆಡೆ ತೋಟಗಾರಿಕೆ ಸಚಿವ ಹಾಗೂ ಕ್ಷೇತ್ರದ ಹಾಲಿ ಶಾಸಕ ಮುನಿರತ್ನ ವಿರುದ್ಧ ಪೋಸ್ಟರ್ ಗಳು ಪ್ರತ್ಯಕ್ಷಗೊಂಡಿವೆ.
'ನೊಂದ ಗುತ್ತಿಗೆದಾರರು ಪ್ರಾಯೋಜಿಸುವ Guess & Win Contest, ಆರ್ ಆರ್ ನಗರಕ್ಕೆ ಮಂಜೂರಾಗಿದ್ದ 10 ಸಾವಿರ ಕೋಟಿ ರೂ. ಎಲ್ಲಿ ಹೋಯ್ತು? 2013ರಿಂದ ಇಲ್ಲಿಯವರೆಗೆ 10 ಸಾವಿರ ಕೋಟಿ ರೂ.ಗಳನ್ನು ಶಾಸಕ ಮುನಿರತ್ನಂ ನಾಯ್ಡು ಮಂಜೂರು ಮಾಡಿಸಿಕೊಂಡಿದ್ದಾರೆ. ಆದರೆ ರಸ್ತೆ, ಪಾರ್ಕ್, ಕೆರೆಗೆ ವಿನಿಯಪೊಗಿಸಿರುವುದು 2 ರಿಂದ 3 ಸಾವಿರ ಕೋಟಿ ರೂಪಾಯಿ. ಉಳಿದ ಹಣ ಎಲ್ಲಿ ಹೋಯ್ತು? ಊಹಿಸಿ. ಈಗಲೇ 8447704040 ಈ ನಂಬರ್ ಗೆ ಕಾಲ್ ಮಾಡಿ ತಿಳಿಸಿ ' ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ.
ಮುನಿರತ್ನ ಅವರ ಕಚೇರಿ, ಆರ್ ಆರ್ ನಗರ ಆರ್ಚ್, ಬಸ್ ನಿಲ್ದಾಣಗಳಲ್ಲಿ ಪೋಸ್ಟರ್ ಗಳು ಕಾಣಿಸಿಕೊಂಡಿವೆ.