ಬ್ಯಾರೀಸ್ ಕಲ್ಚರಲ್ ಫೋರಮ್ ದುಬೈ ವತಿಯಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಿಗೆ ಸನ್ಮಾನ
ದುಬೈ: ಬ್ಯಾರೀಸ್ ಕಲ್ಚರಲ್ ಫೋರಮ್ (BCF) ದುಬೈ ವತಿಯಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ದುಬೈಯ ಎಮಿರೇಟ್ಸ್ ಪ್ಯಾಲೇಸ್ ಹೋಟೆಲ್ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಡಿ ಕೆ ಶಿವಕುಮಾರ್ ಅವರೊಂದಿಗೆ ಪ್ರಸಕ್ತ ಕರ್ನಾಟಕದ ಸಾಮಾಜಿಕ ಪರಿಸ್ಥಿತಿ, ಮುಖ್ಯವಾಗಿ ಅನಿವಾಸಿ ಕನ್ನಡಿಗರ ಸಮಸ್ಯೆಗಳು ಮೊದಲಾದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
BCF ಅಧ್ಯಕ್ಷರಾದ ಡಾ. ಬಿಕೆ ಯೂಸುಫ್ ಅನುಪಸ್ಥಿತಿಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮಹಮ್ಮದ್, ಉಪಾಧ್ಯಕ್ಷರಾದ ಎಂ.ಇ. ಮೂಳೂರು, ಅಬ್ದುಲ್ ಲತೀಫ್ ಮುಲ್ಕಿ, ಅಫೀಕ್ ಹುಸೈನ್, ಕೋಶಾಧಿಕಾರಿ ಅಸ್ಲಮ್ ಕಾರಾಜೆ, ಪದಾಧಿಕಾರಿಗಳಾದ ಯಾಕೂಬ್ ದೀವಾ, ಸಮದ್ ಬೀರಾಲಿ, ರಫೀಕ್ ಸತ್ತಿಕಲ್, ಹುಸೈನ್ ಸತ್ತಿಕಲ್, ಸಂಸ್ಥೆಯ ಹಿತೈಷಿಗಳಾದ ಸಮೀರ್ ಕೆ.ಎಂ., ಶಮೂನ್ ಶಾಬಂದ್ರಿ, ಸರ್ಫ್ರಾಝ್ ಜುಕಾಕೋ, ಯೂಸುಫ್ HMC, ಅಝೀಮ್ ಉಚ್ಚಿಲ್, ಯುಟಿ ಇಫ್ತಿಕಾರ್, BCF ಸಂಸ್ಥೆಯ ಹಲವಾರು ನಾಯಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಡಾ. ಕಾಪು ಮಹಮ್ಮದ್, ಎಂ.ಇ.ಮೂಳೂರು, ಅಬ್ದುಲ್ ಲತೀಫ್ ಮುಲ್ಕಿ, ಅಫೀಕ್ ಹುಸೈನ್, ಯಾಕೂಬ್ ದೀವಾ ಅವರು ಡಿಕೆ ಶಿವಕುಮಾರ್ ರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ಡಿಕೆ ಶಿವಕುಮಾರ್ ಅವರು ಕೃತಜ್ಞತೆ ಸಲ್ಲಿಸಿದರು.