ಸಾಗರ: ಕರ್ತವ್ಯದ ವೇಳೆ ಕುಸಿದುಬಿದ್ದು ಛಾಯಾಗ್ರಾಹಕ ಮೃತ್ಯು
ಸಾಗರ, ಡಿ.11: ನಗರದ ವೃತ್ತಿನಿರತ ಛಾಯಾಗ್ರಾಹಕನೋರ್ವ ಕಾರ್ಯಕ್ರಮವೊಂದರಲ್ಲಿ ಫೋಟೋ ತೆಗೆಯುತ್ತಿರುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದು ಮೃತಪಟ್ಟ ಘಟನೆ ರವಿವಾರ ಸಂಜೆ ನಡೆದಿದೆ.
ಸಾಗರ ತಾಲೂಕಿನ ಹೆಗ್ಗೋಡು ಸಮೀಪದ ಹೆಬ್ಬೈಲಿನ ಸೋಮೇಶ್ವರ ದೇವಸ್ಥಾನದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಇಲ್ಲಿನ ರಾಮನಗರದ ನಿವಾಸಿ ಚಂದ್ರು(42) ಮೃತ ಪಟ್ಟ ಛಾಯಾಗ್ರಾಹಕ ಎಂದು ತಿಳಿದು ಬಂದಿದೆ.
ಕಾರ್ಯಕ್ರಮದಲ್ಲಿ ಫೋಟೋ ತೆಗೆಯುವ ವೇಳೆ ಚಂದ್ರು ಕುಸಿದು ಬಿದ್ದಿದ್ದಾರೆನ್ನಲಾಗಿದ್ದು, ತಕ್ಷಣ ಅವರನ್ನು ನಗರದ ಉಪವಿಭಾಗೀಯ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಯಿತಾದರೂ ಆ ವೇಳೆಗೆ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
ನಗರದ ಶಿಲ್ಪ ಸ್ಟುಡಿಯೋ ಮಾಲಕರಾಗಿದ್ದ ಚಂದ್ರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
Next Story