ಭಾರತ ಯಾವಾಗ 'ಚೀನಾ ಪೇ ಚರ್ಚಾ' ನಡೆಸುತ್ತದೆ: ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು. ಭಾರತವು "ಚೀನಾದ ಕುರಿತು ಯಾವಾಗ ಚರ್ಚೆ ನಡೆಸುತ್ತದೆ" ಎಂದು ಪ್ರಶ್ನಿಸಿದ್ದಾರೆ.
ರಾಜ್ಯಸಭೆಯಲ್ಲಿ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರತ-ಚೀನಾ ನಡುವೆ ನಡೆದಿರುವ ಘರ್ಷಣೆಯ ಬಗ್ಗೆ ಮಾತನಾಡಲು ಸದನದ ಅಧ್ಯಕ್ಷರು ಅಧಿಕಾರ ನೀಡಿದ್ದರೂ ಅದರ ಬಗ್ಗೆ ಮಾತನಾಡಲು ನನಗೆ ಅವಕಾಶ ನೀಡಲಿಲ್ಲ ಎಂದು ಖರ್ಗೆ ಶುಕ್ರವಾರ ಹೇಳಿದ ನಂತರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಡೋಕ್ಲಾಮ್ ಪ್ರದೇಶದಲ್ಲಿ ಆಯಕಟ್ಟಿನ ಸಿಲಿಗುರಿ ಕಾರಿಡಾರ್‌ಗೆ ಸಮೀಪದಲ್ಲಿರುವ ಜಂಫೇರಿ ಪರ್ವತದವರೆಗೆ ಚೀನಾ ಪಡೆಗಳು ತನ್ನ ನೆಲೆ ನಿರ್ಮಿಸುತ್ತಿವೆ ಎಂದು ಖರ್ಗೆ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಈ ವಿಷಯವು "ನಮ್ಮ ರಾಷ್ಟ್ರೀಯ ಭದ್ರತೆಗೆ ಅತ್ಯಂತ ಕಳವಳಕಾರಿ" ಎಂದು ಅವರು ಹೇಳಿದರು.
ಭಾರತ್ ಜೋಡೋ ಯಾತ್ರೆಯ 100 ನೇ ದಿನವಾಗಿದ್ದ ಶುಕ್ರವಾರ ರಾಜಸ್ಥಾನದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ. ಆದರೆ ಕೇಂದ್ರ ಸರ್ಕಾರವು "ಬೆದರಿಕೆಯನ್ನು ನಿರ್ಲಕ್ಷಿಸುತ್ತಿದೆ" ಹಾಗೂ "ಸತ್ಯಗಳನ್ನು ಮರೆಮಾಚುತ್ತಿದೆ" ಎಂದು ಹೇಳಿದ್ದರು.