ಅನುಮತಿ ಇಲ್ಲದೆ ತನ್ನ ಭಾವಚಿತ್ರ ಬಳಸಿದ 'ಪೂಮಾ'ಗೆ ಅನುಷ್ಕಾ ಶರ್ಮಾ ತರಾಟೆ
ಮುಂಬೈ: ತನ್ನ ಅನುಮತಿ ಇಲ್ಲದೆ ತನ್ನ ಭಾವಚಿತ್ರ ಬಳಸಿಕೊಂಡಿದ್ದಕ್ಕೆ Puma ಸಂಸ್ಥೆಯನ್ನು ಅನುಷ್ಕಾ ಶರ್ಮಾ (Anushka Sharma) ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಅನುಷ್ಕಾ ಶರ್ಮಾ, ತನ್ನ ಭಾವಚಿತ್ರದೊಂದಿಗೆ ಪೂಮಾ ಶೀರ್ಷಿಕೆ ಹೊಂದಿರುವ ಭಾವಚಿತ್ರವನ್ನು ಹಂಚಿಕೊಂಡು, ಪೂಮಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ಹೇ ಪೂಮಾ ಇಂಡಿಯಾ, ನಾನು ನಿಮ್ಮ ಸಂಸ್ಥೆಯ ಉತ್ಪನ್ನ ರಾಯಭಾರಿ ಅಲ್ಲದೆ ಇರುವುದರಿಂದ ನೀವು ನನ್ನ ಭಾವಚಿತ್ರವನ್ನು ಸಾರ್ವಜನಿಕ ಪ್ರಚಾರಕ್ಕೆ ಬಳಸುವ ಮುನ್ನ ನನ್ನ ಅನುಮತಿ ಪಡೆಯಬೇಕಿತ್ತು. ದಯವಿಟ್ಟು ಆ ಚಿತ್ರವನ್ನು ಹಿಂಪಡೆಯಿರಿ" ಎಂದು ಸಿಟ್ಟಿನ ಇಮೋಜಿ ಬಳಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಹಳದಿ-ಹಸಿರು ಬಣ್ಣದ ಕ್ರೀಡಾ ಒಳ ಅಂಗಿ ಹಾಗೂ ಕಪ್ಪು ನಿಲುವಂಗಿ ತೊಟ್ಟಿರುವ ತನ್ನ ಭಾವಚಿತ್ರವನ್ನು ಅನುಷ್ಕಾ ಶರ್ಮಾ ಹಂಚಿಕೊಂಡಿದ್ದರು. ಈ ಭಾವಚಿತ್ರವನ್ನು ಅನುಷ್ಕಾ ಶರ್ಮಾರ ಅನುಮತಿ ಪಡೆಯದೆ ಪೂಮಾ ಸಂಸ್ಥೆಯು ತನ್ನ ಋತುವಿನ ಕೊನೆಯ ಮಾರಾಟದ ಉತ್ತೇಜನಕ್ಕಾಗಿ ಬಳಸಿಕೊಂಡಿತ್ತು.