ಅಟಲ್ ಉತ್ಸವದ ಅಟಲ್ ಟ್ರೋಫಿ ಅನಾವರಣ
ಉಡುಪಿ: ಉಡುಪಿ ನಗರ ಬಿಜೆಪಿ ಮತ್ತು ಗ್ರಾಮಾಂತರ ಬಿಜೆಪಿ ವತಿಯಿಂದ ಡಿ. 24ರಂದು ಎಂಜಿಎಂ ಕಾಲೇಜಿನ ಕುಂಜಿಬೆಟ್ಟು ಮೈದಾನದಲ್ಲಿ ನಡೆಯುವ ಅಟಲ್ ಟ್ರೋಫಿ ರಾಷ್ಟ್ರಮಟ್ಟದ ಪ್ರೊ ಕಬಡ್ಡಿ ಟೂರ್ನಿಯ ಆಕರ್ಷಕ ಮಿರುಗುವ ಟ್ರೋಫಿ ಅನಾವರಣ ಕಾರ್ಯಕ್ರಮ ಗುರುವಾರ ನಡೆಯಿತು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಟ್ರೋಫಿ ಅನಾವರಣ ಮಾಡಿ, ದೇಶದ ವೃತ್ತಿಪರ 12 ಕಬಡ್ಡಿ ತಂಡಗಳು ಹೊನಲು ಬೆಳಕಿನ ಕಬಡ್ಡಿಯಲ್ಲಿ ಪಾಲ್ಗೊಳ್ಳಲಿವೆ. ಡಿ.25ರಂದು ಬೂತ್ ಸಂಗಮವನ್ನು ಹಬ್ಬದ ರೀತಿಯಲ್ಲಿ ಯಶಸ್ಸಿಗೊಳಿಸಲು ಸಹಕರಿಸುವಂತೆ ಮನವಿ ಮಾಡಿದರು.
ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ ಕೊಳ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ ಎಸ್.ಕಲ್ಮಾಡಿ, ಪ್ರೊ ಕಬಡ್ಡಿ ಸಂಚಾಲಕ ಗಿರೀಶ್ ಎಂ.ಅಂಚನ್, ಯುವ ಸಂಗಮ ಸಂಚಾಲಕ ಉಮೇಶ್ ನಾಯ್ಕ್, ಉಡುಪಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಬಾಲಕೃಷ್ಣ ಶೆಟ್ಟಿ, ಕಲ್ಯಾಣಪುರ ಗ್ರಾ.ಪಂ. ಅಧ್ಯಕ್ಷ ಕೃಷ್ಣ ದೇವಾಡಿಗ, ತೆಂಕನಿಡಿಯೂರು ಗ್ರಾ.ಪಂ.ಅಧ್ಯಕ್ಷೆ ಗಾಯತ್ರಿ, ಬಡಾನಿಡಿಯೂರು ಗ್ರಾಪಂ ಅಧ್ಯಕ್ಷ ಪ್ರಭಾಕರ ತಿಂಗಳಾಯ, ಅಂಬಲಪಾಡಿ ಗ್ರಾ.ಪಂ.ಅಧ್ಯಕ್ಷೆ ರೋಹಿಣಿ ಉಪಸ್ಥಿತರಿದ್ದರು
ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಸ್ವಾಗತಿಸಿ, ಕೆ.ರಾಘವೇಂದ್ರ ಕಿಣಿ ನಿರೂಪಿಸಿದರು.