ಸಾಗರ: ಬೈಕ್ ಅಪಘಾತಕ್ಕೆ ವಿದ್ಯಾರ್ಥಿ ಬಲಿ
ಸಾಗರ, ಡಿ.23: ಬೈಕೊಂದು ಅಪಘಾತಕ್ಕೀಡಾಗಿ (Accident) ಡಿಪ್ಲೊಮಾ ಓದುತ್ತಿದ್ದ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಆನಂದಪುರ ಸಮೀಪದ ಕೈರಾ ಸಮೀಪ ನಡೆದಿರುವುದು ವರದಿಯಾಗಿದೆ.
ಸಾಗರದ ಪಾಲಿಟೆಕ್ನಿಕ್ ಕಾಲೇಜಿನ ಡಿಪ್ಲೊಮಾ ಓದುತ್ತಿದ್ದ ವಿದ್ಯಾರ್ಥಿ ಎಲ್ಡ್ರನ್ ಫೆರ್ನಾಂಡಿಸ್ (17) ಮೃತ ಬಾಲಕ.
ಆನಂದಪುರ ಸಮೀಪದ ಯಡೆಹಳ್ಳಿಯ ನಿವಾಸಿಯಾಗಿದ್ದ ಎಲ್ಡ್ರನ್ ಫೆರ್ನಾಂಡಿಸ್ ರಾಷ್ಟ್ರೀಯ ಹೆದ್ದಾರಿ 206 ಸಮೀಪ ಗುರುವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪಘಾತ ಹೇಗೆ ಸಂಭವಿಸಿದ ಎಂಬುದು ತಿಳಿದುಬಂದಿಲ್ಲ.
ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಆನಂದಪುರ ಪೊಲೀಸರು ಭೇಟಿ ನೀಡಿದ್ದಾರೆ.
Next Story