ಜಾಮೀನು ನಿಯಮ ಉಲ್ಲಂಘಿಸಿ ಆರ್.ಡಿ ಪಾಟೀಲ್ ನಾಪತ್ತೆ: ಇದು ಸರ್ಕಾರದ ಕೈವಾಡವೇ ಎಂದು ಪ್ರಶ್ನಿಸಿದ ಕಾಂಗ್ರೆಸ್
PSI ಹಗರಣ
ಬೆಂಗಳೂರು. ಡಿ.24: ' PSI ಹಗರಣದ ಆರೋಪಿಗಳ ವಿಚಾರದಲ್ಲಿ ಬಿಜೆಪಿ ಸರ್ಕಾರ "ರಕ್ಷಣಾತ್ಮಕ ಆಟ" ಆಡಿಕೊಂಡು ಬಂದಿದೆ' ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 'ಆರೋಪಿ ಆರ್.ಡಿ ಪಾಟೀಲ್‌ಗೆ ಜಾಮೀನು ಸಿಗುವಲ್ಲಿ ಸರ್ಕಾರದ ವೈಫಲ್ಯವಿದೆ ಎಂದು ಇತ್ತೀಚಿನ ಆಡಿಯೋದಲ್ಲಿ ಗೃಹಸಚಿವರು ಒಪ್ಪಿದ್ದರು. ಸಾವಿರಾರು ಯುವಕರ ಭವಿಷ್ಯವನ್ನು ಮಾರಾಟ ಮಾಡಿದ ನಂತರ ಈಗ ಆತ ನಾಪತ್ತೆಯಾಗಿದ್ದಾನೆ. ಇದು ಸರ್ಕಾರದ ವೈಫಲ್ಯವೋ, ಕೈವಾಡವೋ?' ಎಂದು ಪ್ರಶ್ನೆ ಮಾಡಿದೆ.
ಹೈಕೋರ್ಟ್‌ನ ಕಲಬುರಗಿ ಪೀಠದಿಂದ ಈಚೆಗೆ ಜಾಮೀನು ಪಡೆದ ಪಿಎಸ್‌ಐ ಹಗರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ಬಿಡುಗಡೆಯಾದ ದಿನದಿಂದ ನಾಪತ್ತೆಯಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಪೊಲೀಸರು ಮೂರನೇ ನೋಟಿಸ್ ಜಾರಿಗೊಳಿಸಿದ್ದಾರೆ.
PSI ಆರೋಪಿಗಳ ವಿಚಾರದಲ್ಲಿ ಬಿಜೆಪಿ ಸರ್ಕಾರ "ರಕ್ಷಣಾತ್ಮಕ ಆಟ" ಆಡಿಕೊಂಡು ಬಂದಿದೆ!
— Karnataka Congress (@INCKarnataka) December 24, 2022
ಆರೋಪಿ ಆರ್.ಡಿ ಪಾಟೀಲ್‌ಗೆ ಜಾಮೀನು ಸಿಗುವಲ್ಲಿ ಸರ್ಕಾರದ ವೈಫಲ್ಯವಿದೆ ಎಂದು ಇತ್ತೀಚಿನ ಆಡಿಯೋದಲ್ಲಿ ಗೃಹಸಚಿವರು ಒಪ್ಪಿದ್ದರು.
ಸಾವಿರಾರು ಯುವಕರ ಭವಿಷ್ಯವನ್ನು ಮಾರಾಟ ಮಾಡಿದ ನಂತರ ಈಗ ಆತ ನಾಪತ್ತೆಯಾಗಿದ್ದಾನೆ.
ಇದು ಸರ್ಕಾರದ ವೈಫಲ್ಯವೋ, ಕೈವಾಡವೋ? pic.twitter.com/PljuLz4zIC