ಉಡುಪಿ: ಯೋಗ ಬೋಧಕರಾಗಲು ಅವಕಾಶ
ಉಡುಪಿ: ಆಯುಷ್ ಟಿವಿಯು ಕಳೆದ 7 ವರ್ಷಗಳಿಂದ ನಾಡಿನ ಜನರ ಆರೋಗ್ಯ ಮತ್ತು ಭಾರತೀಯ ಪ್ರಾಚೀನ ವೈದ್ಯಕೀಯ ಪರಂಪರೆಯನ್ನು ವಿಶ್ವಕ್ಕೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದರೊಂದಿಗೆ ಯೋಗದಿಂದ ಆರೋಗ್ಯವಾಗಿರಲು ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ, ಜನರಿಗೆ ತಲುಪಿಸಿದೆ.
ಯೋಗವನ್ನು ದೈನಂದಿನ ಜೀವನದ ಒಂದು ಭಾಗವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಅಂಗವಾಗಿ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ (ಎಂ.ಡಿ.ಎನ್.ವೈ) ಯ ಯೋಗ ಸರ್ಟಿಫಿಕೇಷನ್ ಬೋರ್ಡ್ ಸಿಬ್ಬಂದಿ ಪ್ರಮಾಣೀಕರಣ ಮಾನ್ಯತೆಯನ್ನು ಆಯುಷ್ ಟಿವಿ ಪಡೆದಿದೆ.
ಆಯುಷ್ ಟಿವಿಯು ರಾಜ್ಯದಾದ್ಯಂತ ಹತ್ತು ಸಾವಿರಕ್ಕಿಂತಲೂ ಹೆಚ್ಚು ಯೋಗ ಬೋಧಕರನ್ನು ಆನ್ ಲೈನ್ ಪರೀಕ್ಷೆಯ ಮೂಲಕ ನಡೆಸಲು ಚಾಲನೆ ನೀಡುತ್ತಿದ್ದು, ಯೋಗಾಭ್ಯಾಸದಲ್ಲಿ ಆಸಕ್ತಿ ಹೊಂದಿರುವ, ಕನಿಷ್ಠ ಎಸೆಸೆಲ್ಸಿ ಉತ್ತೀರ್ಣರಾಗಿರುವ, 18 ವರ್ಷ ಮೇಲ್ಪಟ್ಟ, ಯೋಗ ಫಾರ್ ವೆಲ್ ನೆಸ್ ಸರ್ಟಿಫಿಕೇಟ್ ಕೋರ್ಸ್ ನಲ್ಲಿ ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು, ಗೃಹಿಣಿಯರು ಭಾಗವಹಿಸಬಹುದಾಗಿದ್ದು, ರಾಜ್ಯದ ಎಲ್ಲಾ ಯೋಗಾಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿ ವೆಬ್ ಸೈಟ್ - www.ayushtv.in/prcb - ಅಥವಾ ಮೊ.ನಂ: 8310471614ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.