"ಹೊಸ ವರ್ಷದ ಉಡುಗೊರೆ" : ಅಡುಗೆ ಅನಿಲ ಬೆಲೆ ಏರಿಕೆಗೆ ಕಾಂಗ್ರೆಸ್ ತರಾಟೆ
ಹೊಸದಿಲ್ಲಿ: ವಾಣಿಜ್ಯ ಅಡುಗೆ ಅನಿಲದ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಇಂದು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಇದು ಜನರಿಗೆ ಸರಕಾರದ "ಹೊಸ ವರ್ಷದ ಉಡುಗೊರೆ" ಹಾಗೂ "ಇದು ಕೇವಲ ಆರಂಭವಷ್ಟೇ" ಎಂದು ಟ್ವೀಟಿಸಿದೆ.
"ಹೊಸ ವರ್ಷದ ಮೊದಲ ಉಡುಗೊರೆ, ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಈಗ ರೂ. 25 ದುಬಾರಿಯಾಗಿದೆ. ಇದು ಆರಂಭವಷ್ಟೇ" ಎಂದು ಕಾಂಗ್ರೆಸ್ ಹಿಂದಿಯಲ್ಲಿ ಟ್ವೀಟ್ ಮಾಡಿದೆ.
ವಾಣಿಜ್ಯ ಸಿಲಿಂಡರ್ ಬಳಕೆಯ ಗ್ರಾಹಕರು ಈಗ 19 ಕೆಜಿ ಅಡುಗೆ ಅನಿಲ ಸಿಲಿಂಡರ್ಗೆ ರೂ. 25 ಹೆಚ್ಚು ಪಾವತಿಸಬೇಕಾಗುತ್ತದೆ. ಗೃಹಬಳಕೆಯ ಅಡುಗೆ ಅನಿಲ ದರವು ಬದಲಾಗದೆ ಉಳಿದಿದೆ. ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ಗಳ ದರದಲ್ಲಿ ಹೆಚ್ಚಳವು ರೆಸ್ಟೋರೆಂಟ್ಗಳಿಗೆ ಹೊಡೆತ ನೀಡುತ್ತದೆ ಮತ್ತು ಊಟ-ತಿಂಡಿ ಬೆಲೆ ಜಾಸ್ತಿ ಮಾಡಿ ವ್ಯಾಪಾರಿಗಳು ಅದನ್ನು ಗ್ರಾಹಕರಿಗೆ ವರ್ಗಾಯಿಸಬಹುದು.
नए साल का पहला गिफ्ट
— Congress (@INCIndia) January 1, 2023
कॉमर्शियल गैस सिलेंडर 25 रुपए महंगा हो गया।
अभी तो ये शुरुआत है...#HappyNewYear
Next Story