ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ‘ಟೇಲ್ ಸ್ಟ್ರೈಕ್’ಗೆ ತುತ್ತಾದ ಇಂಡಿಗೋ ವಿಮಾನ
ಕೋಲ್ಕತಾ,ಜ.4: ಇಂಡಿಗೋ ವಿಮಾನವೊಂದು ಸೋಮವಾರ ಕೋಲ್ಕತಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ‘ಟೇಲ್ ಸ್ಟ್ರೈಕ್’ ಅನುಭವಿಸಿದೆ. ಘಟನೆಯ ಮೌಲ್ಯಮಾಪನ ಮತ್ತು ದುರಸ್ತಿಗಾಗಿ ವಿಮಾನವನ್ನು ಕೋಲ್ಕತಾ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದು,ಈ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.
ಟೇಕ್ ಆಫ್ ಮಾಡುವಾಗ ಅಥವಾ ಇಳಿಯುವಾಗ ವಿಮಾನದ ಬಾಲವು ನೆಲ ಅಥವಾ ಇತರ ಸ್ಥಿರ ವಸ್ತುವನ್ನು ಅಪ್ಪಳಿಸಿದಾಗ ‘ಟೇಲ್ ಸ್ಟ್ರೈಕ್’ ಉಂಟಾಗುತ್ತದೆ.
ವಿಮಾನವು ಢಾಕಾದಿಂದ ಕೋಲ್ಕತಾಕ್ಕೆ ಆಗಮಿಸಿತ್ತು ಮತ್ತು ಅದು ಇಳಿದ ಬಳಿಕ ಹಾನಿಯುಂಟಾಗಿದ್ದು ಪತ್ತೆಯಾಗಿದೆ ಎಂದು ವಾಯುಯಾನ ಸುರಕ್ಷತೆಯ ಮಾಹಿತಿ ಕೇಂದ್ರ ಜೆಎಸಿಡಿಎಸಿ ಟ್ವೀಟಿಸಿದೆ.
ಮಂಗಳವಾರ ದಿಲ್ಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ಥೈಲ್ಯಾಂಡ್ನ ಫುಕೆಟ್ಗೆ ಯಾನವನ್ನು ಆರಂಭಿಸಿದ್ದ ಇಂಡಿಗೋ ವಿಮಾನವು ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ವಾಪಸಾಗಿತ್ತು.
Next Story