Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸಾರ್ಥಕತೆಯ ವೇದಿಕೆಯಲ್ಲಿ ಧನ್ಯತೆಯ...

ಸಾರ್ಥಕತೆಯ ವೇದಿಕೆಯಲ್ಲಿ ಧನ್ಯತೆಯ ಮಹಾಪೂರ

ಡಾ. ರೊನಾಲ್ಡ್ ಕೊಲಾಸೊಗೆ ತಾಯ್ನಾಡಿನ ಗೌರವ ಸಮರ್ಪಣೆ

6 Jan 2023 5:11 PM IST
share
ಸಾರ್ಥಕತೆಯ ವೇದಿಕೆಯಲ್ಲಿ ಧನ್ಯತೆಯ ಮಹಾಪೂರ
ಡಾ. ರೊನಾಲ್ಡ್ ಕೊಲಾಸೊಗೆ ತಾಯ್ನಾಡಿನ ಗೌರವ ಸಮರ್ಪಣೆ

ವಿವಿಧ ಕ್ಷೇತ್ರಗಳ ಸಾಧನೆಗಳಿಗಾಗಿ ವರ್ಲ್ಡ್ ಬುಕ್ ಆಫ್  ರೆಕಾರ್ಡ್ ನಲ್ಲಿ ನಮೂದಾದವರು ಹಲವರಿದ್ದಾರೆ. ಆದರೆ, ಮಾನವೀಯ ಸ್ಪಂದನೆಗಾಗಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾದ ಮೊದಲ ವ್ಯಕ್ತಿ ಡಾ. ರೊನಾಲ್ಡ್ ಕೊಲಾಸೊ. ವಿಶ್ವದಾದ್ಯಂತ ಮಾನವೀಯ ಸಾಧನೆಗಳಿಗಾಗಿ ಅದರಲ್ಲೂ ವಿಶೇಷವಾಗಿ ಕನ್ನಡ ನಾಡಿಗಾಗಿ ನೀಡಿದ ಅನನ್ಯ ಕೊಡುಗೆಗಳಿಗಾಗಿ ಲಂಡನ್ ನ ಪ್ರತಿಷ್ಠಿತ ಬ್ರಿಟಿಷ್ ಸಂಸತ್ತಿನ ಹೌಸ್ ಆಫ್ ಕಾಮನ್ಸ್ ನಲ್ಲಿ ಸನ್ಮಾನಿತರಾಗಿ ಕನ್ನಡದ ಹೆಮ್ಮೆಯನ್ನು ಹೆಚ್ಚಿಸಿದ, ಭಾರತದ ಘನತೆಯನ್ನು ಎತ್ತಿ ಹಿಡಿದ ಡಾ. ರೊನಾಲ್ಡ್ ಕೊಲಾಸೊ ಶುಕ್ರವಾರ ತಾಯ್ನಾಡಿನಲ್ಲಿ ಹಲವು ದಿಗ್ಗಜರು, ಗಣ್ಯರು ಹಾಗು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸನ್ಮಾನಿತರಾದರು.

ಯಶಸ್ವೀ ಉದ್ಯಮಿಯಾಗಿ, ಸಮಾಜ ಸೇವಕರಾಗಿ, ಕೊಡುಗೈ ದಾನಿಯಾಗಿ ಹಲವು ವರ್ಷಗಳಿಂದ ವಿಶ್ವದ ನಾನಾ ದೇಶಗಳಲ್ಲಿ ವ್ಯಾಪಕ ಮನ್ನಣೆ ಗಳಿಸಿರುವ ಡಾ. ರೊನಾಲ್ಡ್ ಕೊಲಾಸೊ ಅವರ ಅಪರೂಪದ ಅಭಿನಂದನಾ ಕಾರ್ಯಕ್ರಮ ದೇವನಹಳ್ಳಿ ಸಮೀಪದ ಸ್ವಿಸ್ ಟೌನ್‌ನ ಕ್ಲಾರ್ಕ್ಸ್ ಎಕ್ಸೋಟಿಕಾದ ಓಷನ್ ಹಾಲ್‌ನ ಅಚ್ಚುಕಟ್ಟಾದ ವೇದಿಕೆಯಲ್ಲಿ ಅರ್ಥಪೂರ್ಣವಾಗಿ ನೆರವೇರಿತು. ತುಳುನಾಡು ಕರಾವಳಿಯ ಜನಪದ ವಾದ್ಯಗಳ ಹಿಮ್ಮೇಳದ ಜತೆಗೆ ಮುಖ್ಯವೇದಿಕೆಗೆ ಕೊಲಾಸೊ ಅವರನ್ನು ಗೌರವ ಪೂರ್ವಕವಾಗಿ ನಿಗಧಿತ ಸಮಯಕ್ಕೆ ಸರಿಯಾಗಿ ಕರೆತರಲಾಯಿತು.

ಬಹಳ ಸಂಕೋಚದಿಂದಲೇ ಎಲ್ಲರ ನಡುವೆ ಕುಟುಂಬ ಸಮೇತರಾಗಿ ಕುಳಿತಿದ್ದ ಕೊಲಾಸೊ ಅವರು ನೆರೆದಿದ್ದವರೆಲ್ಲರ ಬಾಯಲ್ಲಿ ಹತ್ತು ಹಲವು ರೀತಿಯಲ್ಲಿ ಶ್ಲಾಘನೆಗೆ ಪಾತ್ರರಾದರು. ಅವರ ಸೇವೆಗಳ ಮುಗಿಯದ ಪಟ್ಟಿ ಭಾರೀ ಅಚ್ಚರಿಗೆ ಕಾರಣವಾಯಿತು. ಹಲವು ದೇಶಗಳ ನಾನಾ ಕ್ಷೇತ್ರಗಳ ಗಣ್ಯರು, ರಾಷ್ಟ್ರ ಮತ್ತು ನಾಡಿನ ಹಲವು ದಿಗ್ಗಜರು, ರಾಜಕಾರಣಿಗಳು, ಧರ್ಮಗುರುಗಳು ಕೂಡ   ಜನ ಸಾಮಾನ್ಯರ ನಡುವೆಯೇ ಕುಳಿತು ಈ ವಿಶಿಷ್ಟ ಅಭಿನಂದನಾ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ನಾಡಿನಲ್ಲಿ ದೊಡ್ಡ ಉದ್ಯಮಿಗಳಿಗೆ ಯಾವುದೇ ಕೊರತೆ ಇಲ್ಲ. ಆದರೆ, ಕೇವಲ ಲಾಭ-ಪ್ರತಿಷ್ಠೆ- ವಿಲಾಸಕ್ಕೆ ಸೀಮಿತರಾಗದೆ ಸದಾ ಮಾನವೀಯ ಸ್ಪಂದನೆಯ, ಸರ್ವಧರ್ಮೀಯರಿಗೂ ಉಪಕಾರಿಯಾಗಿರುವ ಎಷ್ಟು ಉದ್ಯಮಿಗಳಿದ್ದಾರೆ ಎಂದು ಹುಡುಕಿಕೊಂಡು ಹೊರಟರೆ ಆ ಹುಡುಕಾಟ ಸೀದಾ ರೊನಾಲ್ಡ್ ಕೊಲಾಸೊ ಅವರ ಬಳಿಗೆ ಬಂದು ಇವರ ಸನ್ನಿಧಿಯಲ್ಲೇ ಕೊನೆಯಾಗುತ್ತದೆ ಎನ್ನುವ ಮೆಚ್ಚುಗೆಯ ಮಾತುಗಳು ಅಭಿನಂದನಾ ಕಾರ್ಯಕ್ರಮದ ವೇದಿಕೆಯಲ್ಲಿ ಮತ್ತು ವೇದಿಕೆಯ ಕೆಳಗೂ ವ್ಯಕ್ತವಾದವು.

ಮನುಷ್ಯ ನಿರ್ಮಿತ ಜಾತಿ-ಧರ್ಮದ, ಬಡವ-ಶ್ರೀಮಂತಿಕೆಯ ಮಿತಿಗಳನ್ನು ಮೀರಿ ನಿಂತು ತಮ್ಮ ಮಾನವೀಯ ವ್ಯಾಪ್ತಿಯನ್ನು ಕೊಲಾಸೊ ವಿಶಾಲವಾಗಿ ಹಿಗ್ಗಿಸಿಕೊಂಡರು ಎನ್ನುವ ಪ್ರಶಂಸೆಗೆ ಈ ಕಾರ್ಯಕ್ರಮ ಸಾಕ್ಷಿಯಾಗಿತ್ತು. ಧರ್ಮದ ಬಗ್ಗೆ ಭಾಷಣ ಮಾಡುವವರ ನಡುವೆ ಧರ್ಮವಂತರಾಗಿ ಬದುಕುತ್ತಿರುವವರನ್ನು ಹುಡುಕುವುದೂ ಕಷ್ಟ. ಆದರೆ ಒಂದು ಧರ್ಮ ಅನುಯಾಯಿಯಾಗಿ ಸರ್ವಧರ್ಮೀಯರನ್ನು ಸಮಾನ ಅಂತಃಕರಣದಿಂದ ಕಾಣುವ  ಅಪ್ಪಟ ಧರ್ಮವಂತರಾಗಿ ಬದುಕುತ್ತಿರುವ ರೊನಾಲ್ಡ್ ಕೊಲಾಸೋ ವಿಶ್ವಪ್ರಜ್ಞೆಯ ಕಾಯಕಜೀವಿ ಎನ್ನುವ ಮೆಚ್ಚುಗೆಯ ಮಾತುಗಳು ಕಾರ್ಯಕ್ರಮದುದ್ದಕ್ಕೂ ಕೇಳಿಸಿದವು.

ಗುಡಿ-ಚರ್ಚ್-ಮಸೀದಿಗಳನ್ನು ಬಿಟ್ಟು ಹೊರಬನ್ನಿ ಎಂದು ಕರೆ ನೀಡಿದ ಕುವೆಂಪು ಅವರ ಆಶಯವನ್ನೇ  ಸ್ವಲ್ಪ ಭಿನ್ನವಾಗಿ ಆಚರಿಸಿದ ಕುಲಾಸೊ ಅವರು ಕಟ್ಟಿಸಿದ ಗುಡಿ-ಚರ್ಚ್-ಮಸೀದಿಗಳ ವಿಡಿಯೊ ತುಣುಕುಗಳನ್ನು ಕಾರ್ಯಕ್ರಮದ ಆರಂಭದಲ್ಲೇ ಪ್ರದರ್ಶಿಸಲಾಯಿತು. ಜತೆಗೆ ಕೊಲಾಸೊ ಅವರ ಕಾಳಜಿಯ ಗರ್ಭದಲ್ಲಿ ತಲೆ ಎತ್ತಿನಿಂತಿರುವ  ಶಾಲಾ ಕಾಲೇಜುಗಳು , ಸಮುದಾಯ ಭವನ, ಪೊಲೀಸ್ ಠಾಣೆ, ಆಸ್ಪತ್ರೆ ಕಟ್ಟಡಗಳು, ತಹಶೀಲ್ದಾರ್ ಕಚೇರಿಯ ಕಟ್ಟಡಗಳು, ಬಡವರಿಗೆ ಕಟ್ಟಿಸಲಾದ ಮನೆಗಳ ವಿಡಿಯೋವನ್ನು ನೋಡಿದ ಮಂದಿ ಆಶ್ಚರ್ಯ ಚಕಿತರಾದರು. "ಇವರು ಇದನ್ನೆಲ್ಲಾ ಯಾವಾಗ ಕಟ್ಟಿಸಿದರು, ಎಷ್ಟು ವರ್ಷದಿಂದ ಇದನ್ನೆಲ್ಲಾ ಮಾಡುತ್ತಿದ್ದಾರೆ" ಎನ್ನುವ ಉದ್ಘಾರ ಪದೇ ಪದೇ ಕಿವಿ ಮೇಲೆ ಬೀಳುವಂತೆ ನಾನಾ ಕ್ಷೇತ್ರಗಳ, ನಾನಾ ದೇಶಗಳ ಗಣ್ಯರು ಚರ್ಚಿಸುತ್ತಿದ್ದರು.  ಕೊಲಾಸೊ ಅವರನ್ನು ವೇದಿಕೆಯ ಮೇಲಿದ್ದ ಗಣ್ಯರು ಹೊಗಳಿದಕ್ಕಿಂತ ಭಿನ್ನವಾಗಿ ವೇದಿಕೆಯ ಮುಂದೆ ಕುಳಿತಿದ್ದವರು ಚಿತ್ರಿಸುತ್ತಿದ್ದರು.

ನಿಗಧಿತ ಸಮಯಕ್ಕೆ ಸರಿಯಾಗಿ ಶುರುವಾದ ಕಾರ್ಯಕ್ರಮ ಅತ್ಯಂತ ಶಿಸ್ತು ಮತ್ತು ಅಚ್ಚುಕಟ್ಟಾಗಿ ಮೂರು ಗಂಟೆಗಳ ಕಾಲ ಸಾಗಿತು. ಹತ್ತು ಹಲವರು ಡಾ. ಕೊಲಾಸೊ ಅವರನ್ನು  ಬಾಯಿ ತುಂಬ ಶ್ಲಾಘಿಸಿದರೂ ಸ್ವತಃ  ಕೊಲಾಸೊ ಅವರು ಮಾತ್ರ ಹೆಚ್ಚು ಮಾತನಾಡದೆ ನೆರೆದಿದ್ದವರಿಗೆ ಸರಳವಾಗಿ ಸಾಮಾಜಿಕ ಬದ್ದತೆಯ ಪ್ರಮಾಣವಚನ ಬೋಧಿಸಿ ಎಲ್ಲರಿಗೂ ಅವರವರ ಪಾಲಿನ ಧನ್ಯತೆಗಳನ್ನು ಅಭಿನಂದನೆಗಳನ್ನು ಅರ್ಪಿಸಿ ಮಾತು ಮುಗಿಸಿದರು.

ವಿಶ್ವಭೂಷಣ ಕೃತಿ  ಲೋಕಾರ್ಪಣೆ

ಕಾರ್ಯಕ್ರಮದ ಪ್ರಮುಖ ಭಾಗವಾಗಿ "ವಿಶ್ವಭೂಷಣ ಡಾ.ರೊನಾಲ್ಡ್ ಕೊಲಾಸೊ" ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ಕೊಲಾಸೊ ಅವರ ಬದುಕಿನ ಪಯಣವನ್ನು ಪರಿಚಯಿಸುವ ಈ ಕೃತಿಯನ್ನು ಲಂಡನ್ ಪಾರ್ಲಿಮೆಂಟ್ ಸದಸ್ಯರಾದ ವೀರೇಂಧ್ರ ಶರ್ಮ ಲೋಕಾರ್ಪಣೆಗೊಳಿಸಿದರು. ಕೊಲಾಸೊ ಅವರ ಸಾಮಾಜಿಕ ಕಾರ್ಯಕ್ರಮಗಳಿಂದ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಸಾವಿರಾರು ಜನರ ಪ್ರತಿನಿಧಿಯಾಗಿ ರಾಜಣ್ಣ ಮತ್ತು ಸುಬ್ಬಣ್ಣ ಅವರಿಗೆ ಕೃತಿಯ ಮೊದಲ ಪ್ರತಿಗಳನ್ನು ಅರ್ಪಿಸಲಾಯಿತು. ಕೃತಿಯ ಗೌರವ ಪ್ರತಿಯನ್ನು ಪತ್ರಕರ್ತ ಶೇಷಣ್ಣ (ಶೇಷಚಂದ್ರಿಕ) ಅವರು ಸ್ವೀಕರಿಸಿದರು. ಕೃತಿಯ ಸಂಪಾದಕರುಗಳಾದ ಎಸ್.ವೆಂಕಟೇಶ್‌ಮೂರ್ತಿ, ಎನ್.ನರಸಿಂಹಮೂರ್ತಿ, ಮೇ.ಚ.ಕೋಟಪ್ಪ ಅವರನ್ನು ಸನ್ಮಾನಿಸಲಾಯಿತು.

share
Next Story
X