ಪಿ.ಎಂ. ಇಸ್ಮಾಯೀಲ್
ಉಳ್ಳಾಲ: ಪಾವೂರು ಗ್ರಾಮದ ಮಲಾರ್ ಅರಸ್ತಾನ ನಿವಾಸಿ ಪಿ.ಎಂ. ಇಸ್ಮಾಯೀಲ್ (78) ಶುಕ್ರವಾರ ಮುಂಜಾವ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ಪಾವೂರು ಗಾಡಿಗದ್ದೆಯ ನೇತ್ರಾವತಿ ನದಿ ತೀರದ ಬಳಿ ಪಡಿತರ ಅಂಗಡಿ ಹೊಂದಿದ್ದ ಅವರು ದಿನಸಿ ವ್ಯಾಪಾರಿ ಮತ್ತು ಬೀಡಿ ಗುತ್ತಿಗೆದಾರರೂ ಆಗಿದ್ದರು.
ಅರಸ್ತಾನ ಅಲ್ ರಿಫಾಯಿಯಾ ಅಸೋಸಿಯೇಶನ್‌ನ ಅಧ್ಯಕ್ಷರಾಗಿ, ಅಲ್‌ಮುಬಾರಕ್ ಜುಮಾ ಮಸೀದಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಮೃತರ ದಫನ ಕಾರ್ಯವು ಶುಕ್ರವಾರ ಮಧ್ಯಾಹ್ನ ಮಲಾರ್ ಹರೇಕಳದ ಮುಹಿಯ್ಯುದ್ದೀನ್ ಜುಮಾ ಮಸೀದಿಯ ಆವರಣದಲ್ಲಿ ನೆರವೇರಿತು.
Next Story