ವಿಮಾನದಲ್ಲಿ ವೃದ್ದೆಯ ಮೇಲೆ ಮೂತ್ರ ವಿಸರ್ಜಿಸಿದ ಪ್ರಕರಣ: ಆರೋಪಿಯನ್ನು ಉದ್ಯೋಗದಿಂದ ಕಿತ್ತೆಸೆದ ಅಮೆರಿಕನ್ ಕಂಪೆನಿ
ಹೊಸದಿಲ್ಲಿ,ಜ.6: ಏರ್ ಇಂಡಿಯಾ ವಿಮಾನದಲ್ಲಿ ಪಾನಮತ್ತನಾಗಿ, ವೃದ್ಧೆಯೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ ಪ್ರಕರಣದ ಆರೋಪಿ ಶಂಕರ್ ಮಿಶ್ರಾನನ್ನು ವಜಾಗೊಳಿಸಿರುವುದಾಗಿ ಆತ ಉದ್ಯೋಗದಲ್ಲಿದ್ದ ಅಮೆರಿಕದ ಹಣಕಾಸು ಸೇವೆಗಳ ಸಂಸ್ಥೆ ವೆಲ್ಸ್ಫೆರ್ಗೊ ಶುಕ್ರವಾರ ತಿಳಿಸಿದೆ. ನವೆಂಬರ್ 26ರಂದು ನ್ಯೂಯಾರ್ಕ್ನಿಂದ ದಿಲ್ಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಈ ಘಟನೆ ನಡೆದಿತ್ತು.
ಶಂಕರ್ ಮಿಶ್ರಾ ವಿರುದ್ಧ ಹೊರಿಸಲಾದ ಆರೋಪಗಳು ಅತ್ಯಂತ ಆತಂಕಕಾರಿಯಾಗಿರುವುದನ್ನು ಆತನನ್ನು ಉದ್ಯೋಗದಿಂದ ಉಚ್ಚಾಟಿಸಲಾಗಿದೆ ಎಂದು ಅಮೆರಿಕದ ಹಣಕಾಸು ಸೇವೆಗಳ ಕಂಪೆನಿ ವೆಲ್ಸ್ ಫಾರ್ಗೊ ತಿಳಿಸಿದೆ.
Next Story