RRR ಚಿತ್ರವನ್ನು ವೀಕ್ಷಿಸಿದ ಆಸ್ಕರ್ ವಿಜೇತೆ ಜೆಸ್ಸಿಕಾ ಚಸ್ಟೇನ್ ಪ್ರತಿಕ್ರಿಯಿಸಿದ್ದು ಹೀಗೆ....
ಹೊಸದಿಲ್ಲಿ: ಎಸ್‌ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರ ಹಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರವು ಪ್ರಮುಖ ವಿದೇಶಿ ತಾರೆಗಳಿಂದ ಪ್ರಶಂಸೆಯನ್ನು ಗಳಸುತ್ತಿದೆ.
ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ಆರ್ಟ್ಸ್ (BAFTA) ಮತ್ತು ಆಸ್ಕರ್‌ಗಳ ಲಾಂಗ್‌ಲಿಸ್ಟ್ ಮತ್ತು ಶಾರ್ಟ್‌ಲಿಸ್ಟ್‌ನಲ್ಲಿ ಆರ್‌ಆರ್‌ಆರ್ ಚಿತ್ರ ಸ್ಥಾನ ಗಳಿಸಿದ ಬೆನ್ನಲ್ಲೇ, ಇದೀಗ ಹಾಲಿವುಡ್ ನಟಿ, ಆಸ್ಕರ್ ವಿಜೇತೆ ಜೆಸ್ಸಿಕಾ ಚಸ್ಟೈನ್ ಅವರು ಆರ್‌ಆರ್‌ಆರ್ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.
ಇತ್ತೀಚೆಗೆ ಆರ್‌ಆರ್‌ಆರ್ ಅನ್ನು ವೀಕ್ಷಿಸಿದ ನಟಿ ಜೆಸ್ಸಿಕಾ ಈ ಚಿತ್ರವನ್ನು ವೀಕ್ಷಿಸುವುದು ಪಾರ್ಟಿಯಂತಿತ್ತು ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಟಿ ಆರ್‌ಆರ್‌ಆರ್ ಬಗ್ಗೆ ಹೊಗಳಿ ಟ್ವೀಟ್ ಮಾಡಿದ ಬೆನ್ನಿಗೆ ಚಿತ್ರತಂಡ ಹಾಲಿವುಡ್ ನಟಿಗೆ ಧನ್ಯವಾದ ತಿಳಿಸಿದ್ದು, "ಜೆಸ್ಸಿಕಾ, ನೀವು RRR ಅನ್ನು ಆನಂದಿಸುತ್ತಿರುವುದು ನಮಗೆ ಸಂತೋಷ ತಂದಿದೆ" ಎಂದು ಬರೆದಿದೆ.
Watching this film was such a party https://t.co/ew9pg5YwCn
— Jessica Chastain (@jes_chastain) January 6, 2023
Jessica, you enjoying RRR made us happy https://t.co/NcHlc1HpLX
— RRR Movie (@RRRMovie) January 6, 2023