'RRR' ಚಿತ್ರದ ‘ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ: ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದು ಹೀಗೆ...
ಹೊಸದಿಲ್ಲಿ: ‘ನಾಟು ನಾಟು’ಎಂಬ ಹಾಡು ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಪಾತ್ರವಾದ ಹಿನ್ನೆಲೆಯಲ್ಲಿ ‘ಆರ್ಆರ್ಆರ್’ಚಿತ್ರ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅಭಿನಂದಿಸಿದ್ದಾರೆ. ಈ ಪ್ರತಿಷ್ಠಿತ ಗೌರವವು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ತಂದಿದೆ ಎಂದು ಅವರು ಹೇಳಿದರು.
ಬ್ಲಾಕ್ಬಸ್ಟರ್ ಚಿತ್ರದ ಹಾಡು 'ಅತ್ಯುತ್ತಮ ಮೂಲ ಹಾಡು-ಚಲನ ಚಿತ್ರ' ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದು ಗೋಲ್ಡನ್ ಗ್ಲೋಬ್ ಗೆದ್ದ ಮೊದಲ ಭಾರತೀಯ ನಿರ್ಮಾಣದ ಚಿತ್ರವಾಗಿದೆ.
"ಒಂದು ವಿಶೇಷ ಸಾಧನೆ! ಎಂಎಂ ಕೀರವಾನಿ, ಪ್ರೇಮ್ ರಕ್ಷಿತ್, ಕಾಲಭೈರವ, ಚಂದ್ರಬೋಸ್, ರಾಹುಲ್ಲ್ ಸಿಪ್ಲಿಗುಂಜ್ ಅವರಿಗೆ ಅಭಿನಂದನೆಗಳು. ನಾನು ಎಸ್ ಎಸ್ ರಾಜಮೌಳಿ,, ತಾರಕ್ , ರಾಮಚರಣ್ ಹಾಗೂ ಆರ್ ಆರ್ ಆರ್ ಚಿತ್ರದ ಇಡೀ ತಂಡವನ್ನು ಅಭಿನಂದಿಸುತ್ತೇನೆ. ಇದು ಪ್ರತಿಷ್ಠಿತ ಗೌರವ, ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆ ವುಂಟು ಮಾಡಿದೆ" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
S S ರಾಜಮೌಳಿಯವರ ಹಿಟ್ ಚಿತ್ರ "RRR" ಕೂಡ ಅತ್ಯುತ್ತಮ ಇಂಗ್ಲೀಷ್ ಯೇತರ ಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿತು ಆದರೆ "ಅರ್ಜೆಂಟೀನಾ, 1985" ಗೆ ಸೋತಿತ್ತು.
ಹಿರಿಯ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಸಂಯೋಜಿಸಿದ "ನಾಟು ನಾಟು" ಗೀತೆ ಕಳೆದ ಮಾರ್ಚ್ನಲ್ಲಿ " ಬಿಡುಗಡೆಯಾದಾಗಿನಿಂದ ಜನಮನಗೆದ್ದಿತ್ತು.
A very special accomplishment! Compliments to @mmkeeravaani, Prem Rakshith, Kaala Bhairava, Chandrabose, @Rahulsipligunj. I also congratulate @ssrajamouli, @tarak9999, @AlwaysRamCharan and the entire team of @RRRMovie. This prestigious honour has made every Indian very proud. https://t.co/zYRLCCeGdE
— Narendra Modi (@narendramodi) January 11, 2023