ಡಾ. ಜಯರಾಮ ಶೆಟ್ಟಿ
ಮಂಗಳೂರು: ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ರೇಡಿಯೇಶನ್ ಆನ್ಕಾಲಾಜಿ ವಿಭಾಗದ ಮುಖ್ಯಸ್ಥರಾಗಿದ್ದ ಕ್ಯಾನ್ಸರ್ ತಜ್ಞ ಡಾ. ಜಯರಾಮ ಶೆಟ್ಟಿ (55) ಬುಧವಾರ ಹೃದಯಾಘಾತದಿಂದ ನಿಧನ ಹೊಂದಿದರು.
ಮೂಲತಃ ಗುರುಪುರ ಸಮೀಪದ ಪರಾರಿ ಕೊಳಕೆಬೈಲಿನ ದೋಟಮನೆಯವರಾಗಿದ್ದ ಅವರು, ಕೆಲವು ವರ್ಷದಿಂದ ನಗರದ ‘ಅಭಿಮಾನ್ ಹೈಟ್ಸ್’ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಕೆಲವು ಸಮಯ ಕೆಎಂಸಿ ಆಸ್ಪತ್ರೆಯಲ್ಲೂ ಸೇವೆ ಸಲ್ಲಿಸಿದ್ದರು.
ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಮೃತರು ಅಗಲಿದ್ದಾರೆ.
Next Story