ಕ್ರೀಡೆ
ಸಿರಾಜ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ
ಲಂಕಾ ವಿರುದ್ಧ ಭಾರತಕ್ಕೆ ದಾಖಲೆ ಅಂತರದ ಜಯ; ಸರಣಿ ಕ್ಲೀನ್ ಸ್ವೀಪ್

Photo: Twitter/@BCCI
ತಿರುವನಂತಪುರ, ಜ.15: ವಿರಾಟ್ ಕೊಹ್ಲಿ ಹಾಗೂ ಶುಭಮನ್ ಗಿಲ್ ಶತಕ, ಮುಹಮ್ಮದ್ ಸಿರಾಜ್ ನೇತೃತ್ವದ ಬೌಲರ್‌ಗಳ ಅಮೋಘ ಆಟದ ನೆರವಿನಿಂದ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು 317 ರನ್‌ಗಳಿಂದ ಭಾರೀ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡು ಕ್ಲೀನ್ ಸ್ವೀಪ್ ಸಾಧಿಸಿದೆ.
ಗೆಲ್ಲಲು 391 ರನ್ ಗುರಿ ಪಡೆದಿದ್ದ ಶ್ರೀಲಂಕಾವು 22 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 73 ರನ್ ಗಳಿಸಿತು. ಲಹಿರು ಕುಮಾರ ವಿಕೆಟನ್ನು ಪಡೆದ ಕುಲದೀಪ್ ಯಾದವ್ ಲಂಕಾದ ಇನಿಂಗ್ಸ್‌ಗೆ ತೆರೆ ಎಳೆದರು. ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದ ಅಶೆನ್ ಬಂಡಾರ ಬ್ಯಾಟಿಂಗ್‌ಗೆ ಇಳಿಯಲಿಲ್ಲ.
ಭಾರತ ಇದೇ ಮೊದಲ ಬಾರಿ ಏಕದಿನ ಕ್ರಿಕೆಟ್‌ನಲ್ಲಿ ಭಾರೀ ಅಂತರದ ರನ್‌ಗಳಿಂದ ಜಯ ಸಾಧಿಸಿದೆ. ಈಹಿಂದೆ ನ್ಯೂಝಿಲ್ಯಾಂಡ್ ತಂಡ ಐರ್‌ಲ್ಯಾಂಡ್ ವಿರುದ್ಧ 290 ರನ್‌ನಿಂದ ಗೆದ್ದುಕೊಂಡಿತ್ತು.
ಸಿರಾಜ್(4-32) ಯಶಸ್ವಿ ಬೌಲರ್ ಎನಿಸಿಕೊಂಡರು. ಮುಹಮ್ಮದ್ ಶಮಿ(2-20) ಹಾಗೂ ಕುಲದೀಪ್ ಯಾದವ್(2-16) ತಲಾ ಎರಡು ವಿಕೆಟ್‌ಗಳನ್ನು ಪಡೆದರು.
ಗೆಲ್ಲಲು ದೊಡ್ಡ ಮೊತ್ತ ನೋಡಿಯೇ ಕಂಗೆಟ್ಟಿದ ಶ್ರೀಲಂಕದ ಪರ ನುವಾನಿದು ಫೆರ್ನಾಂಡೊ (19 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ