ಉಚ್ಚಿಲ ಉರೂಸ್ ಗೆ ಚಾಲನೆ
ಉಳ್ಳಾಲ: ಉಚ್ಚಿಲದಲ್ಲಿ ಅಸಯ್ಯದ್ ಶರೀಫುಲ್ ಅರಬಿ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ನಡೆಯುತ್ತಿರುವ ಉರೂಸ್ ಗೆ ಖಾಝಿ ಝೈನುಲು ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರು ಚಾಲನೆ ನೀಡಿ ಮಾತನಾಡಿದರು.
ಫಝಲ್ ಕೋಯಮ್ಮ ತಂಙಳ್ ದುಆ ನೆರವೇರಿಸಿದರು. ಉಚ್ಚಿಲ ಮಸೀದಿ ಮುದರ್ರಿಸ್ ಎಂ.ಪಿ.ಇಬ್ರಾಹಿಂ ಫೈಝಿ ಉದ್ಯಾವರ ಮಖಾಂ ಝಿಯಾರತ್ ನಾ ನೇತೃತ್ವ ವಹಿಸಿದ್ದರು. ಉಚ್ಚಿಲ ಮಸೀದಿ ಅಧ್ಯಕ್ಷ ಇಸ್ಮಾಯೀಲ್ ಹಾಜಿ ಕೊಪ್ಪಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉರೂಸ್ ಕಮಿಟಿ ಗೌರವ ಅಧ್ಯಕ್ಷ ಸಿ.ಎ.ಅಬ್ದುಲ್ ಮಜೀದ್ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಸೈನ್ ಸಅದಿ ಕೆ.ಸಿ.ರೋಡ್ ಧಾರ್ಮಿಕ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕುಬನೂರು ಮುದರ್ರಿಸ್ ಅಕ್ಬರ್ ಅಲಿ ಸಅದಿ, ಉಚ್ಚಿಲ ಮದ್ರಸ ಸದ್ ರ್ ಅಬ್ದುಲ್ ಅಝೀಝ್ ಅಸ್ಲಮಿ, ಉಚ್ಚಿಲ ಮಸೀದಿ ಮಾಜಿ ಅಧ್ಯಕ್ಷ ಅಬ್ಬಾಸ್ ಹಾಜಿ ಪೆರಿಬೈಲ್, ಫಲಾಹ್ ವಿದ್ಯಾ ಸಂಸ್ಥೆ ಅಧ್ಯಕ್ಷ ಯು.ಬಿ.ಮುಹಮ್ಮದ್ ಹಾಜಿ, ಅಬ್ದುಲ್ಲಾ ಹಾಜಿ, ಬಟ್ಟಪ್ಪಾಡಿ ಮಸೀದಿ ಅಧ್ಯಕ್ಷ ಯು.ಅಬೂಬಕರ್ ಹಾಜಿ, ಎಸ್.ಎಂ ಬಶೀರ್ ಅಹ್ಮದ್ ಉದ್ಯಾವರ ಮತ್ತಿತರರು ಉಪಸ್ಥಿತರಿದ್ದರು.
ದರ್ಸ್ ವಿದ್ಯಾರ್ಥಿ ಅನ್ಸಾರ್ ಮುಡಿಪು ಖಿರಾಅತ್ ಪಠಿಸಿದರು. ಉರೂಸ್ ಕಮಿಟಿ ಪ್ರಧಾನ ಕಾರ್ಯದರ್ಶಿ ಸಲಾಂ ಉಚ್ಚಿಲ ಸ್ವಾಗತಿಸಿದರು. ಕೋಶಾಧಿಕಾರಿ ಹಸೈನಾರ್ ಹಾಜಿ ವಂದಿಸಿದರು.