ದ್ವಿತೀಯ ಏಕದಿನ: ನ್ಯೂಝಿಲ್ಯಾಂಡ್ 108 ರನ್‌ಗೆ ಆಲೌಟ್
ಮುಹಮ್ಮದ್ ಶಮಿ ಮಾರಕ ಬೌಲಿಂಗ್ ದಾಳಿ
ಮುಹಮ್ಮದ್ ಶಮಿ ಮಾರಕ ಬೌಲಿಂಗ್ ದಾಳಿ
ರಾಯ್‌ಪುರ, ಜ.21: ಹಿರಿಯ ವೇಗದ ಬೌಲರ್ ಮುಹಮ್ಮದ್ ನೇತೃತ್ವದ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ನ್ಯೂಝಿಲ್ಯಾಂಡ್ ತಂಡ ಭಾರತ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಕೇವಲ 108 ರನ್‌ಗೆ ಆಲೌಟಾಗಿದೆ.
ಶನಿವಾರ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ನ್ಯೂಝಿಲ್ಯಾಂಡ್ 34.3 ಓವರ್‌ಗಳಲ್ಲಿ 108 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.
ಶಮಿ(3-18)ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರೆ, ವಾಶಿಂಗ್ಟನ್ ಸುಂದರ್(2-7) ಹಾಗೂ ಹಾರ್ದಿಕ್ ಪಾಂಡ್ಯ(2-16)ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಮುಹಮ್ಮದ್ ಸಿರಾಜ್(1-10), ಶಾರ್ದೂಲ್ ಠಾಕೂರ್(1-26) ಹಾಗೂ ಕುಲದೀಪ್ ಯಾದವ್(1-29)ತಲಾ ಒಂದು ವಿಕೆಟ್ ಉರುಳಿಸಿದರು.
ನ್ಯೂಝಿಲ್ಯಾಂಡ್ ಪರ ಗ್ಲೆನ್ ಫಿಲಿಪ್ಸ್(36 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು. ಮೊದಲ ಪಂದ್ಯದಲ್ಲಿ ಮಿಂಚಿದ್ದ ಮಿಚೆಲ್ ಸ್ಯಾಂಟ್ನರ್(27 ರನ್) ಹಾಗೂ ಬ್ರೆಸ್‌ವೆಲ್(22)ಎರಡಂಕೆಯ ಸ್ಕೋರ್ ಗಳಿಸಿದರು.
Next Story