ಸೈಯದ್ ಮುಹಮ್ಮದ್ ಭಾಷಾ ತಂಙಳ್
ಸಾಗರ: ತಾಲ್ಲೂಕಿನ ಮುಂಬಾಳು ಮುಹಿದ್ದೀನ್ ಜುಮಾ ಮಸೀದಿ ಸ್ಥಾಪಕ ಅಧ್ಯಕ್ಷರೂ, ಎಸ್ಎನ್ ನಗರದ ಅಲಮುಲ್ ಹುದಾ ಮದ್ರಸದ ಗೌರವಾಧ್ಯಕ್ಷ ಸೈಯದ್ ಮುಹಮ್ಮದ್ ಭಾಷಾ ತಂಙಳ್ ಅಲ್ ಹಾದಿ (77) ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ.
ಸೈಯದ್ ಮಹಮ್ಮದ್ ಹಾಗೂ ನಫೀಸಾ ದಂಪತಿಯ ಪುತ್ರನಾಗಿ ಸೈಯದ್ ಮುಹಮ್ಮದ್ ಭಾಷಾ ತಂಙಳ್ ಜನಿಸಿದರು. ನಗರದ ತ್ಯಾಗರ್ತಿ ತಿರುವಿನಲ್ಲಿರುವ ಮರ್ಕಝುಲ್ ಉಲೂಂ ಎಜುಕೇಶನ್ ಅಕಾಡೆಮಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸೈಯದ್ ಭಾಷಾ ತಂಙಳ್ ಅವರು ಸರಳ, ಸಜ್ಜನಿಕೆಯ ವ್ಯಕ್ತಿಯಾಗಿ ರಾಜ್ಯಾದ್ಯಂತ ಗುರುತಿಸಿಕೊಂಡಿದ್ದರು. ನಿಧನದ ನಿಮಿತ್ತ ಮರ್ಕಝ್ ಶಾಲಾ, ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಯಿತು.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story