varthabharthi


ಕ್ರೀಡೆ

3ನೇ ಏಕದಿನ: ರೋಹಿತ್, ಶುಭಮನ್ ಶತಕ; ನ್ಯೂಝಿಲ್ಯಾಂಡ್ ಗೆ 386 ರನ್ ಗುರಿ ನೀಡಿದ ಭಾರತ

ವಾರ್ತಾ ಭಾರತಿ : 24 Jan, 2023

Photo: BCCI/Twitter

ಇಂದೋರ್, ಜ.24: ಶುಭಮನ್ ಗಿಲ್(112 ರನ್, 78 ಎಸೆತ)ಹಾಗೂ ರೋಹಿತ್ ಶರ್ಮಾ(101 ರನ್, 85 ಎಸೆತ)ಶತಕ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(54 ರನ್, 38 ಎಸೆತ)ಅರ್ಧಶತಕದ ಸಹಾಯದಿಂದ ಭಾರತ ಕ್ರಿಕೆಟ್ ತಂಡ ನ್ಯೂಝಿಲ್ಯಾಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 385 ರನ್ ಗಳಿಸಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ನ್ಯೂಝಿಲ್ಯಾಂಡ್ ತಂಡ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.

   ಬ್ಯಾಟಿಂಗ್ ಸ್ನೇಹಿ ಹೋಳ್ಕರ್ ಸ್ಟೇಡಿಯಮ್‌ನಲ್ಲಿ ರೋಹಿತ್ ಹಾಗೂ ಶುಭಮನ್ ಮೊದಲ ವಿಕೆಟಿಗೆ 26.1 ಓವರ್‌ಗಳಲ್ಲಿ 212 ರನ್ ಸೇರಿಸಿ ಭರ್ಜರಿ ಆರಂಭ ಒದಗಿಸಿದರು. ಆದರೆ ಈ ಇಬ್ಬರು ಔಟಾದ ನಂತರ ಮಧ್ಯಮ ಕ್ರಮಾಂಕದ ಕುಸಿತಕ್ಕೆ ಒಳಗಾದ ಭಾರತವನ್ನು ಹಾರ್ದಿಕ್ ಪಾಂಡ್ಯ (54 ರನ್, 38 ಎಸೆತ, 3 ಬೌಂಡರಿ, 3 ಸಿಕ್ಸರ್) ಆಧರಿಸಿದರು.

ನ್ಯೂಝಿಲ್ಯಾಂಡ್ ಪರ ಬ್ಲೈರ್ ಟಿಕ್ನೆರ್(3-76) ಹಾಗೂ ಜೇಕಬ್ ಡಫಿ(3-100)ತಲಾ ಮೂರು ವಿಕೆಟ್‌ಗಳನ್ನು ಪಡೆದರು.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)