varthabharthi


ಸಿನಿಮಾ

100 ಕ್ಕೂ ಅಧಿಕ ದೇಶಗಳಲ್ಲಿ ತೆರೆಗೆ

ಬಿಡುಗಡೆಗೆ ಮುನ್ನವೇ ದಾಖಲೆ ಸೃಷ್ಟಿಸಿದ 'ಪಠಾಣ್'

ವಾರ್ತಾ ಭಾರತಿ : 24 Jan, 2023

ಮುಂಬೈ: ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ʼಪಠಾಣ್ʼ ಚಿತ್ರವು ಹಲವು ವಿವಾದಗಳ ನಡುವೆಯೂ ಭಾರೀ ಸದ್ದು ಮಾಡುತ್ತಿದೆ. ನಾಲ್ಕು ವರ್ಷಗಳ ನಂತರ ಪೂರ್ಣ ಪ್ರಮಾಣದ ನಾಯಕನಟನಾಗಿ ಥಿಯೇಟರ್‌ಗಳಿಗೆ ಶಾರುಕ್ ಪುನರಾಗಮಿಸುತ್ತಿದ್ದಾರೆ.

ಪಠಾಣ್‌ ಬಿಡುಗಡೆಗಾಗಿ ಕಾಯುತ್ತಿರುವ ಶಾರುಖ್‌ ಅಭಿಮಾನಿಗಳು     ಚಿತ್ರವನ್ನು ವೀಕ್ಷಿಸಲು ಉತ್ಸುಕರಾಗಿದ್ದಾರೆ. ಇತರ ಯಾವುದೇ ಭಾರತೀಯ ಚಿತ್ರಕ್ಕಿಂತ ಮಿಗಿಲಾಗಿ ಪಠಾಣ್‌ ಚಿತ್ರವು ನಾಳೆ ಬರೋಬ್ಬರಿ 100 ಕ್ಕೂ ಹೆಚ್ಚು ದೇಶಗಳಲ್ಲಿ 2,500 ಕ್ಕೂ ಅಧಿಕ ಪರದೆಗಳಲ್ಲಿ ಬಿಡುಗಡೆಯಾಗಲಿದೆ. ಸಾಂಕ್ರಾಮಿಕೋತ್ತರ ಕಾಲದಲ್ಲಿ ಇದೊಂದು ಹೃದಯಸ್ಪರ್ಶಿ ಬೆಳವಣಿಗೆಯಾಗಿದೆ ಎಂದು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರು ಟ್ವೀಟ್‌ ಮಾಡಿದ್ದಾರೆ.

 ಪಠಾಣ್‌ ಚಿತ್ರದ ಬಿಡುಗಡೆಯ ಮೊದಲ ದಿನದಂದು 4 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗುತ್ತವೆ ಎಂದು ತರಣ್ ಆದರ್ಶ್ ಅಂದಾಜಿಸಿದ್ದಾರೆ. ಚಿತ್ರ ಬಿಡುಗಡೆಯಾಗುವ ಮೊದಲ ದಿನವೇ ಅತಿ ಹೆಚ್ಚು ಟಿಕೆಟ್ ಮಾರಾಟವಾದ ಅಗ್ರ ಐದು ಚಿತ್ರಗಳ ಸಾಲಿಗೆ ಪಠಾಣ್‌ ಹೆಸರನ್ನೂ ಆದರ್ಶ್‌ ಸೇರಿಸಿದ್ದಾರೆ.

  

ಸೋಮವಾರ ಸಂಜೆಯ ಹೊತ್ತಿಗೆ, ಪಠಾಣ್ ಚಿತ್ರದ 3.9 ಲಕ್ಷ ಟಿಕೆಟ್‌ಗಳು ಮಾರಾಟವಾಗಿದೆ. ಮಲ್ಟಿಪ್ಲೆಕ್ಸ್ ಸಿನೆಮಾ ಮಂದಿರಗಳಾದ PVR, INOX ಮತ್ತು Cinepolis ವರದಿಗಳ ಆಧಾರದ ಮೇಲೆ ತರಣ್ ಆದರ್ಶ್ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಪಠಾಣ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿದೆ.  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)