varthabharthi


ಅಂತಾರಾಷ್ಟ್ರೀಯ

ಚಿಕಾಗೋ: ಅಪಾರ್ಟ್ಮೆಂಟ್ನಲ್ಲಿ ಗುಂಡುಹಾರಾಟ; ಇಬ್ಬರ ಹತ್ಯೆ

ವಾರ್ತಾ ಭಾರತಿ : 24 Jan, 2023

ಚಿಕಾಗೋ,ಜ.24: ಅಮೆರಿಕದ ಚಿಕಾಗೋ ನಗರದ ಅಪಾರ್ಟ್ಮೆಂಟ್ಗೆ ನುಗ್ಗಿದ ದುಷ್ಕರ್ಮಿಗಳು ಮನಬಂದಂತೆ ಗುಂಡುಹಾರಿಸಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಹಾಗೂ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

 ಸೌತ್ ಶೋರ್ ವಸತಿ ಪ್ರದೇಶದಲ್ಲಿ ಸ್ಥಳೀಯ ಕಾಲಮಾನ ರಾತ್ರಿ 1:45ರ ವೇಳೆಗೆ ಶೂಟೌಟ್ ನಡೆದಿರುವುದಾಗಿ ಚಿಕಾಗೋ ನಗರದ ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

 ಗುಂಡುಹಾರಾಟದ ಬಳಿಕ ಹಲವಾರು ಶಂಕಿತ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಹಾಗೂ ಅವರ ಶೋಧಕ್ಕಾಗಿ ಬಲೆ ಬೀಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

 ಇದೊಂದು ಯೋಜಿತವಾದ ಮನೆ ಆಕ್ರಮಣದ ಘಟನೆಯಾಗಿದೆಯೆಂದು ಉಪಪೊಲೀಸ್ ವರಿಷ್ಠ ಸೀನ್ ಲೌಗ್ರಾನ್ ತಿಳಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇತರ ಮೂವರ ಸ್ಥಿತಿಗಂಭೀರವಾಗಿದ್ದು ಅವರಿಗೆ ಚಿಕಾಗೋ ವಿವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯೆಂದು ಲೌಗ್ರಾನ್ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)