ಕರ್ನಾಟಕ
ಬೊಮ್ಮಾಯಿ ನಾಯಕತ್ವ ಬದಲಾಗಬೇಕೆಂದು ಬಿಎಸ್ವೈ ಬೆಂಬಲಿಗ ಶಾಸಕರಿಂದ ಹೈಕಮಾಂಡ್ಗೆ ಪತ್ರ: ರಮೇಶ್ ಬಾಬು

[ರಮೇಶ್ ಬಾಬು | ಬಿ.ಎಸ್. ಯಡಿಯೂರಪ್ಪ | ಬಸವರಾಜ ಬೊಮ್ಮಾಯಿ]
ಬೆಂಗಳೂರು: 'ಬಿಜೆಪಿಯಲ್ಲಿ ಗುಂಪುಗಾರಿಕೆ ಹೆಚ್ಚಾಗಿದ್ದು, ಬಿ.ಎಸ್. ಯಡಿಯೂರಪ್ಪ, ಬೊಮ್ಮಾಯಿ ನಾನೊಂದು ತೀರಾ ನೀನೊಂದು ತೀರದಂತಾಗಿದ್ದಾರೆ. ದಿಲ್ಲಿಯ ಕಾರ್ಯಕಾರಣಿ ಸಭೆಯಲ್ಲಿ ಯಡಿಯೂರಪ್ಪ ಬೆಂಬಲಿಗ 30 ಶಾಸಕರು ಸಹಿ ಮಾಡಿ ಬೊಮ್ಮಾಯಿ ನಾಯಕತ್ವ ಬದಲಾಗಬೇಕು ಎಂದು ಪತ್ರ ಬರೆದಿದ್ದಾರೆ' ಎಂದು ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ಮುಗಿಲು ಮುಟ್ಟಿದೆ. ಇದೇ ಕಾರಣಕ್ಕೆ ಅಮಿತ್ ಶಾ ಮಂಡ್ಯಕ್ಕೆ ಬಂದಾಗ ಯಡಿಯೂರಪ್ಪ ತಪ್ಪಿಸಿಕೊಂಡರು. ನಳೀನ್ ಕುಮಾರ್, ಸಿ.ಟಿ.ರವಿ ಅವರದ್ದು ಒಂದು ತಂಡ, ಯತ್ನಾಳ್ ಅವರದ್ದು ಮತ್ತೊಂದು ತಂಡ, ಬೊಮ್ಮಾಯಿ, ಯಡಿಯೂರಪ್ಪನವರದ್ದು ಮತ್ತೊಂದು ತಂಡವಾಗಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‍ಗೆ ನಾಯಕರ ಜತೆ ವ್ಯವಹಾರ ಮಾಡಲು ಸಮಯ ಸಾಲುತ್ತಿಲ್ಲ' ಎಂದು ಟೀಕಿಸಿದರು.
'ಬಿಎಸ್ ವೈ ಅವರು ಇಷ್ಟು ದಿನ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ನಡುವೆ ಭಿನ್ನಾಭಿಪ್ರಾಯ ಇರುವುದಾಗಿ ಹೇಳುತ್ತಿದ್ದರು. ಆದರೀಗ ಪ್ರಜಾಧ್ವನಿ ಯಾತ್ರೆ ಬಳಿಕ ಸುಮ್ಮನಾಗಿದ್ದಾರೆ' ಎಂದು ರಮೇಶ್ ಬಾಬು ಹೇಳಿದರು.
ಇದನ್ನೂ ಓದಿ: ಈ ಸರಕಾರದ ಆಯಸ್ಸು ಇನ್ನು 40 ದಿನ ಮಾತ್ರ, ಸಿಎಂ, ಸಚಿವರು ಗಂಟುಮೂಟೆ ಕಟ್ಟಿಕೊಂಡು ಹೊರಡಲಿ: ಡಿಕೆಶಿ
ದೆಹಲಿ ಕಾರ್ಯಕಾರಣಿ ಸಭೆ ವೇಳೆ ಬೊಮ್ಮಾಯಿ ಅವರ ನಾಯಕತ್ವ ಬದಲಾಗಬೇಕೆಂದು 30 MLA ಸಹಿ ಮಾಡಿ ಪತ್ರ ಬರೆದಿದ್ದಾರೆ. ಇದನ್ನ ಬರೆದಿದ್ದು BSY ಅವರ ಬೆಂಬಲಿಗರು.
— Karnataka Congress (@INCKarnataka) January 24, 2023
BSY ಬೆಂಬಲಿಗರು ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗಲು ಸಿದ್ಧರಿಲ್ಲದ ಕಾರಣ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚಾಗಿದೆ.
- ರಮೇಶ್ ಬಾಬು, ಕೆಪಿಸಿಸಿ ವಕ್ತಾರರು
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ