ರಾಜ್ಯದ ಮೂವರು ಮಹಿಳಾ ಸಾಧಕರ ಸಾಧನೆಗಳನ್ನು ಅನಾವರಣಗೊಳಿಸಿದ ಕರ್ನಾಟಕದ ಸ್ತಬ್ಧಚಿತ್ರ
ಹೊಸದಿಲ್ಲಿ: 74ನೇ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರವು ರಾಜ್ಯದ ಮೂವರು ಮಹಿಳಾ ಸಾಧಕಿಯರ ಅಸಾಧಾರಣ ಸಾಧನೆಗಳನ್ನು ಸಾಂಕೇತಿಕವಾಗಿ ಅನಾವರಣಗೊಳಿಸಿದೆ.
ಸೂಲಗಿತ್ತಿ ನರಸಮ್ಮ ಮಗುವನ್ನು ಕೈಯಲ್ಲಿರುವ ಹಿಡಿದಿರುವ ಚಿತ್ರ, 'ವೃಕ್ಷ ಮಾತೆ' ಎಂದೇ ಖ್ಯಾತರಾಗಿರುವ ತುಳಸಿ ಗೌಡ ಹಾಲಕ್ಕಿ ಹಾಗೂ ಸಾಲುಮರದ ತಿಮ್ಮಕ್ಕ ಅವರ ಸ್ತಬ್ದಚಿತ್ರ ಗಮನ ಸೆಳೆಯಿತು. ಈ ಮೂವರು ಸಮಾಜಕ್ಕೆ ನೀಡಿದ ನಿಸ್ವಾರ್ಥ ಕೊಡುಗೆಯಿಂದಾಗಿ ಹೆಸರುವಾಸಿಯಾಗಿದ್ದಾರೆ.
"ಕರ್ನಾಟಕದ ಎಲೆಮರೆಯ ಮಹಿಳಾ ಸಾಧಕರ ಪ್ರತೀಕವಾಗಿ ಸೂಲಗಿತ್ತಿ ನರಸಮ್ಮ,ವೃಕ್ಷ ಮಾತೆ ತುಳಸಿ ಗೌಡ ಹಾಲಕ್ಕಿ ಹಾಗೂ ಸಾಲು ಮರದ ತಿಮ್ಮಕ್ಕರನ್ನೊಳಗೊಂಡ "ನಾರಿ ಶಕ್ತಿ" ಸ್ತಬ್ಧ ಚಿತ್ರ ನವ ದೆಹಲಿಯ ಕರ್ತವ್ಯ ಪಥದಲ್ಲಿ ವಿಜೃಂಭಿಸಿದೆ" ಮುಖ್ಯಮಂತ್ರಿ @BSBommai#RepublicDay #74thRepublicDay #KartavyaPath pic.twitter.com/tyI6SBzkGe
— CM of Karnataka (@CMofKarnataka) January 26, 2023
#RepublicDay | Karnataka's tableau symbolically unveils exceptional achievements of state's 3 women achievers.
— ANI (@ANI) January 26, 2023
Sulagitti Narasamma - a midwife, Tulsi Gowda Halakki - known as 'Vruksha Maate' & Saalumarada Thimmakka are noted names due to their selfless contribution to society. pic.twitter.com/AYHBdwj48k