ನಾಗಯ್ಯ ಶೆಟ್ಟಿ
ಕುಂದಾಪುರ: ಕುಂದಾಪುರ ಹಂಗಳೂರು ನಿವಾಸಿ, ಹಿರಿಯ ಉದ್ಯಮಿ ಚಾರ್ಮಕ್ಕಿ ನಾಗಯ್ಯ ಶೆಟ್ಟಿ(83) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಶನಿವಾರ ನಿಧನರಾದರು.
ವಕ್ವಾಡಿಯ ಶಂಕರ್ ಟೈಲ್ಸ್ ಮಾಲಕರಾದ ನಾಗಯ್ಯ ಶೆಟ್ಟಿ, ದಾನಿ ದಿ. ಚಾರ್ಮಕ್ಕಿ ನಾರಾಯಣ ಶೆಟ್ಟಿ ಅವರ ಕಿರಿಯ ಸಹೋದರ. ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡಿದ್ದ ಇವರು ಪತ್ನಿ, ಇಬ್ಬರು ಪುತ್ರರು, ಒಬ್ಬರು ಪುತ್ರಿ, ಇಬ್ಬರು ಸೊಸೆಯಂದಿರು, ಓರ್ವ ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story