ಬಿಜೆಪಿ ಜೊತೆಗೆ ಮೈತ್ರಿಗಿಂತ ಸಾಯುವುದು ಮೇಲು: ನಿತೀಶ್ ಕುಮಾರ್
ಪಾಟ್ನಾ: ಬಿಜೆಪಿ (BJP) ಜೊತೆ ಮೈತ್ರಿ ಸಾಧಿಸುವುದಕ್ಕಿಂತ ಸಾಯುವುದು ಮೇಲು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಹೇಳಿದ್ದಾರೆ.
ಆರ್ಜೆಡಿ (RJD) ಸ್ಥಾಪಕ ಲಾಲು ಪ್ರಸಾದ್ ಯಾದವ್ ಮತ್ತವರ ಪುತ್ರ ತೇಜಸ್ವಿ ಯಾದವ್ ವಿರುದ್ಧದ ಭ್ರಷ್ಟಾಚಾರ ಆರೋಪದ ಬೆನ್ನಲ್ಲಿ ತಾವು ಬಿಜೆಪಿ ಜೊತೆ ಕೈಜೋಡಿಸಲು ಹಿಂದೆ ಕೈಗೊಂಡಿದ್ದ ನಿರ್ಧಾರ ತಪ್ಪು ಎಂದು ನಿತೀಶ್ ಹೇಳಿದರು. ಅವರು ಹೀಗೆ ಹೇಳುವಾಗ ತೇಜಸ್ವಿ ಯಾದವ್ ಅವರ ಪಕ್ಕದಲ್ಲಿಯೇ ನಿಂತಿದ್ದರು.
ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಹಾರದ 40 ಕ್ಷೇತ್ರಗಳಲ್ಲಿ 36 ರಲ್ಲಿ ಗೆಲುವು ಸಾಧಿಸುವ ಬಗ್ಗೆ ಬಿಜೆಪಿಯ ಹೇಳಿಕೆಯನ್ನು ನಿತೀಶ್ ತಿಸ್ಕರಿಸಿದರು.
ಬಿಜೆಪಿಯು ಜೆಡಿ(ಯು) ಜೊತೆಗೆ ಮೈತ್ರಿ ಹೊಂದಿದ್ದಾಗ ಅದು ಎಲ್ಲಾ ಪ್ರಾದೇಶಿಕ ಪಕ್ಷಗಳ ಬೆಂಬಲಿಗರ ಮತ ಪಡೆಯುತ್ತಿತ್ತು. ಹೀಗೆ ಪಡೆದ ಮತಗಳಲ್ಲಿ ಬಿಜೆಪಿ ಸಿದ್ಧಾಂತಗಳಿಂದ ದೂರವೇ ಉಳಿಯುವ ಮುಸ್ಲಿಮರ ಮತಗಳು ಸೇರಿದ್ದವು ಎಂದು ನಿತೀಶ್ ಹೇಳಿದರು.
Next Story