ಸಾಲಿಡಾರಿಟಿ ಯೂತ್ ಮೂವ್ಮೆಂಟ್ ನಿಂದ 'ಉತ್ತಮ ಆರೋಗ್ಯ-ಉತ್ತಮ ಜೀವನ' ಅಭಿಯಾನಕ್ಕೆ ಚಾಲನೆ
ಬೆಂಗಳೂರು, ಫೆ.3: ಉತ್ತಮ ಆರೋಗ್ಯ-ಉತ್ತಮ ಜೀವನ ಎಂಬ ಶೀರ್ಷಿಕೆಯಲ್ಲಿ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಫೆ.5 ರಿಂದ 25ರವರೆಗೆ ರಾಜ್ಯವಾಪಿ ಆರೋಗ್ಯ ಮತ್ತು ದೈಹಿಕ ಸ್ವಾಸ್ಥ್ಯದ ಕುರಿತು ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನವನ್ನು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ ಶುಕ್ರವಾರ ನಗರದಲ್ಲಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಧಿಕೃತ ಚಾಲನೆಯನ್ನು ನೀಡಿದರು.
ಈ ಅಭಿಯಾನದ ಪ್ರಯುಕ್ತ, ಆರೋಗ್ಯದ ಕುರಿತು ಜಾಗೃತಿ ಸಭೆಗಳು, ಉಪನ್ಯಾಸಗಳು, ಬೀದಿನಾಟಕಗಳು, ಕ್ರೀಡೆ ಮತ್ತು ದೈಹಿಕ ತರಬೇತಿ ಕೇಂದ್ರಗಳ ಸ್ಥಾಪನೆ, ಮಾರಥಾನ್, ಆಟೋಟ ಸ್ಪರ್ಧೆ ಹಾಗೂ ಆರೋಗ್ಯ ಮತ್ತು ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿರುವ ಯುವಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Next Story