ಬೆಂಗಳೂರಿನಲ್ಲಿರುವ ಎಂಎಸ್ ಧೋನಿ ಒಡೆತನದ ಶಾಲೆಗೆ ನೋಟೀಸ್
ಬೆಂಗಳೂರು, ಫೆ.4: ಸಿಬಿಎಸ್ಸಿ ಪಠ್ಯಕ್ರಮವನ್ನು ಅಳವಡಿಸಲಾಗಿದೆ ಎಂದು ಪ್ರಚಾರ ನೀಡಿ, ರಾಜ್ಯ ಪಠ್ಯವನ್ನೇ ಬೋಧಿಸುತ್ತಿರುವ ಮಹೇಂದ್ರ ಸಿಂಗ್ ಧೋನಿ (Mahendra Singh Dhoni,) ಒಡೆತನದ ಗ್ಲೋಬಲ್ ಸ್ಕೂಲ್ಗೆ ಶಿಕ್ಷಣ ಇಲಾಖೆಯು ನೋಟೀಸ್ ಜಾರಿ ಮಾಡಿದೆ.
2021-22 ರಲ್ಲಿ ಸಿಂಗಸಂದ್ರದಲ್ಲಿ ಎಂಎಸ್ ಧೋನಿಯವರ ಶಾಲೆ ಆರಂಭವಾಗಿತ್ತು. ಸಿಬಿಎಸ್ಇ ಸೇರಿದಂತೆ ಇತರೆ ಕೆಲ ಪಠ್ಯಕ್ರಮವನ್ನು ಬೋಧನೆ ಮಾಡಲಾಗುತ್ತದೆ ಎಂದು ಪ್ರಚಾರವನ್ನು ನೀಡಲಾಗಿತ್ತು. ಆದರೆ ಇಲಾಖೆಯಿಂದ ಸಿಬಿಎಸ್ಇ ಬೋಧನೆಗೆ ಎನ್ಓಸಿ ಅನ್ನೇ ಪಡೆದಿಲ್ಲ. ಹಾಗಾಗಿ ಶಾಲೆಯಲ್ಲಿ ರಾಜ್ಯ ಪಠ್ಯಕ್ರಮವನ್ನೇ ಬೋಧನೆ ಮಾಡಲಾಗುತ್ತಿದೆ ಎಂದು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ನೋಟೀಸ್ ಅನ್ನು ಜಾರಿ ಮಾಡಿದೆ ಎಂದು ಬೆಂಗಳೂರು ದಕ್ಷಿಣದ ಉಪನಿರ್ದೇಶಕರು ತಿಳಿಸಿದ್ದಾರೆ.
2022ರಲ್ಲಿ ಪ್ರಾರಂಭವಾದ ಎಂಎಸ್ ಧೋನಿ ಗ್ಲೋಬಲ್ ಸ್ಕೂಲ್ನಲ್ಲಿ ಮೊದಲನೆ ತರಗತಿಗೆ 1 ಲಕ್ಷ 47 ಸಾವಿರದಷ್ಟು ಶುಲ್ಕವಿದೆ. ಎರಡನೆ, ಮೂರನೆ ತರಗತಿ ಪಠ್ಯ, ಪುಸ್ತಕ, ಸಮವಸ್ತ್ರ ಸೇರಿ 1ಲಕ್ಷ 56 ಸಾವಿರ ಫೀಸ್ ನಿಗದಿ ಮಾಡಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.